ETV Bharat / state

ಗೋವಾ ಟು ಹೈದರಾಬಾದ್​​​​ಗೆ ಅಕ್ರಮ ಮದ್ಯ ಸಾಗಣೆ, ಆರೋಪಿಗಳಿಂದ 9 ಲೀಟರ್ ಮದ್ಯ, ಬಸ್​ ಜಪ್ತಿ

ಅಕ್ರಮ ಹಣ ಗಳಿಕೆ ಆಸೆಗೆ ಬಿದ್ದು ಗೋವಾದ ಪಣಜಿಯಿಂದ ಕಲಬುರಗಿ ಮೂಲಕ ಹೈದರಾಬಾದ್‌ಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕಲಬುರಗಿ ಅಬಕಾರಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 9 ಲೀಟರ್ ಮದ್ಯ ಹಾಗೂ ಬಸ್ ಸೇರಿ 45 ಲಕ್ಷ ರೂ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

Kalaburgi Excise Police detected illegal liquor transport
ಅಕ್ರಮ ಮದ್ಯ ಸಾಗಣೆ ಪತ್ತೆ ಹಚ್ಚಿದ ಕಲಬುರಗಿ ಅಬಕಾರಿ ಪೊಲೀಸರು
author img

By ETV Bharat Karnataka Team

Published : Sep 29, 2023, 9:47 PM IST

ಕಲಬುರಗಿ: ತೆಲಂಗಾಣ ರಾಜ್ಯದಲ್ಲಿ ಎಣ್ಣೆ ದುಬಾರಿ ಇರುವುದರಿಂದ ಪಣಜಿ ಟು ಹೈದರಾಬಾದ್​​ಗೆ ಅಕ್ರಮ ಮದ್ಯ ಸಾಗಣೆ ಮಾಡುತ್ತಿದ್ದ ಖಾಸಗಿ ಬಸ್​ ಸಿಬ್ಬಂದಿಯಿಂದ ಕಲಬುರಗಿ ಅಬಕಾರಿ ಪೊಲೀಸರು ಮದ್ಯ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಖಾಸಗಿ ಬಸ್ ಸಿಬ್ಬಂದಿ ಅಬಕಾರಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಅಕ್ರಮ ಹಣ ಗಳಿಕೆ ಆಸೆಗೆ ಬಿದ್ದು ಗೋವಾದ ಪಣಜಿಯಿಂದ ಕಲಬುರಗಿ ಮೂಲಕ ಹೈದರಾಬಾದ್‌ಗೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದರು ಎನ್ನಲಾಗಿದೆ. ಕಲಬುರಗಿ ಅಬಕಾರಿ ಪೊಲೀಸರು ಆರೋಪಿಗಳಿಂದ ವಿವಿಧ ಬ್ರ್ಯಾಂಡ್​​​ನ 9 ಲೀಟರ್ ಮದ್ಯ ಹಾಗೂ ಬಸ್ ಸೇರಿ 45 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ತೆಲಂಗಾಣ ಮತ್ತು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿಗಳಾದ ಮುರಳಿಕೃಷ್ಣ, ಸತ್ಯನಾರಾಯಣ, ಬನೋಥ್ ಬಾಳು, ಬನೋಥ್ ದೇವುಜಾ ಮತ್ತು ವೆಂಕಟೇಶ ಲಾಜರ್ ಬಂಧಿತ ಆರೋಪಿಗಳು.

ಅಬಕಾರಿ ಡಿವೈಎಸ್‌ಪಿ ದೊಡ್ಡಪ್ಪ ಹೆಬಳೆ ಅವರ ನೇತೃತ್ವದಲ್ಲಿ ನಗರದ ಹೊರವಲಯದಲ್ಲಿ ದಾಳಿ ನಡೆಸಿ ಅಕ್ರಮ ಮದ್ಯ ಸಾಗಣೆ ಪತ್ತೆ ಹಚ್ಚಲಾಗಿದೆ. ಪಣಜಿಯಿಂದ ಹೈದರಾಬಾದ್‌ಗೆ ಹೋಗುವ ಖಾಸಗಿ ಬಸ್‌ನಲ್ಲಿ ಚಾಲಕ ಕ್ಯಾಬಿನ್‌ನಲ್ಲಿ ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿರುವುದನ್ನು ಖಚಿತ ಮಾಹಿತಿ ಅರಿತು ಅಬಕಾರಿ ಪೊಲೀಸರ ತಂಡ ದಾಳಿ ಮಾಡಿದೆ. ಆರೋಪಿಗಳ ವಿರುದ್ಧ ಕಲಬುರಗಿ ಉಪ ವಿಭಾಗ ಅಬಕಾರಿ ನಿರೀಕ್ಷಕ ಶಿವಾನಂದ ಪಾಟೀಲ್ ಪ್ರಕರಣ ದಾಖಲಿಸಿ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಅಬಕಾರಿ ನಿರೀಕ್ಷಕ ಸಿದ್ರಾಮಪ್ಪ ತಾಳಿಕೋಟಿ, ಸುಭಾಷ ಕೋಟಿ, ಅಬಕಾರಿ ಉಪ ನಿರೀಕ್ಷಕರಾದ ನರೇಂದ್ರ, ಪ್ರವೀಣಕುಮಾರ, ಕಾನ್ಸ್​ಟೇಬಲ್​ಗಳಾದ ರವಿಕುಮಾರ, ರಾಜೇಂದ್ರ ಮೋಘಾ, ಶಿವಪ್ಪಗೌಡ, ಅರವಿಂದ್, ರಾಜೇಂದ್ರನಾಥ ದಾಳಿ ನಡೆಸಿದ ತಂಡದಲ್ಲಿದ್ದರು.

ಮದ್ಯ ಹೆಚ್ಚಳದ ಲಾಭ ಪಡೆಯಲು ಯತ್ನ: ಗೋವಾ ಮತ್ತು ಹೈದರಾಬಾದ್​ ನಡುವೆ ಕಲಬುರಗಿ ಮಾರ್ಗವಾಗಿ ನಿತ್ಯ ಹತ್ತಾರು ಸ್ಲೀಪರ್, ಓಲ್ವೋ ಬಸ್​ಗಳು ಸಂಚಾರ ಮಾಡುತ್ತವೆ. ಅಲ್ಲಿ ಅಬಕಾರಿ ಚೆಕ್ ಪೋಸ್ಟ್ ಇದ್ದರೂ ಬಸ್​ ಒಳಗಡೆ, ಸ್ಪೇರ್ ಪಾರ್ಟ್ಸ್ ಇಡುವ ಜಾಗ ಸೇರಿದಂತೆ ಕೆಲವೆಡೆ ಯಾರಿಗೂ ಗೊತ್ತಾಗದ ಜಾಗದಲ್ಲಿ ಗೋವಾದಿಂದ ಮದ್ಯದ ಬಾಟಲ್​​ಗಳನ್ನು ಕದ್ದು ಮುಚ್ಚಿ ತರುವುದನ್ನು ಅಬಕಾರಿ ಪೊಲೀಸರು ಬಯಲಿಗೆ ಎಳೆದಿದ್ದಾರೆ.

ಗೋವಾದಲ್ಲಿ ಒಂದು ಬಾಟಲ್ ರಾಯಲ್ ಸ್ಟ್ಯಾಗ್ ವಿಸ್ಕಿ ಬೆಲೆ 330 ರೂಪಾಯಿ ಇದ್ದರೆ, ಕರ್ನಾಟಕದಲ್ಲಿ 1800 ರೂಪಾಯಿ ಇದೆ. ಅನೇಕರು ಗೋವಾಕ್ಕೆ ಹೋಗುವ ಬಸ್​ಗಳ ಸಿಬ್ಬಂದಿ ಜೊತೆ ಸಂಪರ್ಕ ಹೊಂದಿದ್ದು, ಅವರ ಮೂಲಕ ಮದ್ಯದ ಬಾಟಲ್​ಗಳನ್ನು ತರಿಸುತ್ತಿದ್ದರು ಅನ್ನೋದನ್ನು ಅಬಕಾರಿ ಪೊಲೀಸರು ಪತ್ತೆ ಹಚ್ಚಿದ್ದಾರೆ. ಹೀಗಾಗಿ ಬಸ್ ಸಿಬ್ಬಂದಿ, ಗೋವಾದಿಂದ ಬರುವಾಗ ಐದರಿಂದ ಹತ್ತು ಬಾಟಲ್​ಗಳನ್ನು ಅಕ್ರಮವಾಗಿ ತಂದು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ರಾಜ್ಯದ ಬೊಕ್ಕಸಕ್ಕೆ ನಷ್ಟ ಮಾಡಿ, ಗೋವಾ ರಾಜ್ಯದ ಬೊಕ್ಕದ ತುಂಬಿಸುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.

ಇದನ್ನೂಓದಿ:ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ: 87 ಲಕ್ಷ ರೂ ಮೌಲ್ಯದ ಚಿನ್ನ ವಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.