ETV Bharat / state

ಹಣಕ್ಕಾಗಿ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿದ್ನಾ ಗಂಡ?

ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ ಸಾಲ ಮಾಡಿಕೊಂಡು ಹಣಕಾಸು ವಿಚಾರಕ್ಕೆ ಪತಿಯೇ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ.

Husband murders wife
ಪತಿಯಿಂದಲೇ ಪತ್ನಿ ಕೊಲೆ
author img

By

Published : Feb 2, 2021, 2:51 PM IST

ಕಲಬುರಗಿ: ಜಿಲ್ಲೆಯ ಉದಯ ನಗರದಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿ ಟ್ಯಾಂಕ್​ನಲ್ಲಿ ಬಿದ್ದು ಆಕೆ ಸಾವನ್ನಪ್ಪಿದ್ದಾಳೆ ಎಂಬಂತೆ ಬಿಂಬಿಸಿದ್ದ ಪ್ರಕರಣ ಇದೀಗ ಹೊಸ ತಿರುವನ್ನು ಪಡೆದುಕೊಂಡಿದೆ.

ಹಳೆ ಜೇವರ್ಗಿ ರಸ್ತೆಯಲ್ಲಿರುವ ಉದಯ ನಗರದಲ್ಲಿ ಭಾನುವಾರ ರಾತ್ರಿ ಪತಿ ಪ್ರೇಮ್‌ ಸಿಂಗ್ ತನ್ನ ಪತ್ನಿ ಶೀತಲ್ (36)ಳನ್ನು ಹತ್ಯೆಗೈದಿದ್ದಾನೆ. ಈತ ಪತ್ನಿಯ ಕತ್ತು ಹಿಸುಕಿ ನಂತರ ನೀರಿನ ಟ್ಯಾಂಕ್​ನಲ್ಲಿ ಹಾಕಿ, ಟ್ಯಾಂಕ್​ನಲ್ಲಿ ಬಿದ್ದು ಸಾವನ್ನಪ್ಪಿದ್ದಾಳೆ ಎಂಬಂತೆ ಬಿಂಬಿಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ.

ಚಿಂಚೋಳಿಯ ಶೀತಲ್ ಹಾಗೂ ಕಮಲಾಪೂರ ತಾಲೂಕಿನ ದಿನಸಿ ತಾಂಡಾದ ಪ್ರೇಮಸಿಂಗ್ ಇಬ್ಬರಿಗೂ 17 ವರ್ಷಗಳ ಹಿಂದೆ ಮದುವೆ ನಡೆದಿತ್ತು. ದಂಪತಿಗೆ ಮೂವರು ಮಕ್ಕಳಿದ್ದಾರೆ. ಬೆಂಗಳೂರಿನ ಬಟ್ಟೆಯಂಗಡಿಯಲ್ಲಿ ಕೆಲಸ ಮಾಡಿಕೊಂಡು ಸುಖವಾಗಿದ್ದ ಇವರು, ಲಾಕ್​ಡೌನ್​ನಲ್ಲಿ ಬೆಂಗಳೂರು ಬಿಟ್ಟು ಕಲಬುರಗಿಗೆ ಆಗಮಿಸಿ ಉದಯ ನಗರದಲ್ಲಿರುವ ಶೀತಲ್ ತಂದೆಯ ಮನೆಯಲ್ಲಿ ವಾಸವಾಗಿದ್ದರು‌.

ಇತ್ತೀಚೆಗೆ ಶೀತಲ್​ಗೆ ಮೊಬೈಲ್ ಹುಚ್ಚು ಹೆಚ್ಚಾಗಿತ್ತು. ಸದಾ ಟಿಕ್ ‌ಟಾಕ್, ಹಲೋ ಆ್ಯಪ್​​ನಲ್ಲಿ ಮಗ್ನವಾಗಿರುತ್ತಿದ್ದಳಂತೆ. ಫ್ಯಾಷನ್ ಜೀವನಕ್ಕೆ ಬಿದ್ದು ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಕೂಡ ಹೊಂದಿದ್ದಳು ಎಂದು ಪ್ರೇಮಸಿಂಗ್ ಕುಟುಂಬಸ್ಥರು ಆರೋಪಿಸಿದ್ದಾರೆ. ಇದೇ ವಿಷಯವಾಗಿ ಪದೇ ಪದೆ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಜಗಳ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ ಎಂದು ಪ್ರೇಮಸಿಂಗ್ ಕುಟುಂಬಸ್ಥರು‌ ಹೇಳಿದ್ದಾರೆ.

ಶೀತಲ್ ಕುಟುಂಬಸ್ಥರು ಸಹ ಪ್ರತ್ಯಾರೋಪ ಮಾಡಿದ್ದು, ಪ್ರೇಮಸಿಂಗ್‌ಗೆ ದಿನಸಿ ತಾಂಡಾದಲ್ಲಿ ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಅಲ್ಲದೆ ಕಳೆದ ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ ಪ್ರೇಮಸಿಂಗ್ ಸಾಲ ಮಾಡಿಕೊಂಡಿದ್ದ. ಪತ್ನಿಯ ಮೈ ಮೇಲಿನ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದ. ಮಕ್ಕಳ ಹೆಸರಿನಲ್ಲಿದ್ದ ಹಣ ಕೂಡ ಡ್ರಾ ಮಾಡಿಕೊಂಡಿದ್ದ ಎಂದು ಆರೋಪಿಸಿದ್ದಾರೆ‌.

ಇದೇ ವಿಷಯವಾಗಿ ಜಗಳ ನಡೆದು ಕೊಲೆ ನಡೆದಿದೆ ಎನ್ನುವುದು ಶೀತಲ್ ಕುಟುಂಬಸ್ಥರ ಆರೋಪವಾಗಿದೆ. ಸದ್ಯ ಪ್ರೇಮಸಿಂಗ್​ನನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ತನಿಖೆ ನಂತರ ನಿಜಾಂಶ ತಿಳಿಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.