ETV Bharat / state

ಸಾಲದ ವಿಚಾರವಾಗಿ ಪತಿ-ಪತ್ನಿ ನಡುವೆ ಮನಸ್ತಾಪ.. ವಿಷ ಸೇವಿಸಿ ಗಂಡ ಸಾವು, ಹೆಂಡತಿ ಆಸ್ಪತ್ರೆಗೆ ದಾಖಲು.. - Wife attempted suicide in Kalburgi

ಹೆಂಡತಿ ವಿಷ ಸೇವಿಸಿರುವ ವಿಚಾರ ತಿಳಿದು, ಇತ್ತ ಗಂಡನು ವಿಷ ಸೇವನೆ ಮಾಡಿದ್ದಾರೆ. ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮನೆಯಲ್ಲೇ ವಿಷ ಸೇವಿಸಿದ ಬಸವರಾಜ್ ಮೃತಪಟ್ಟಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Wife attempted suicide in Kalburgi
ಸಾಲದ ವಿಚಾರವಾಗಿ ಪತಿ-ಪತನಿ ನಡುವೆ ಮನಸ್ತಾಪ
author img

By

Published : Oct 10, 2021, 3:38 PM IST

ಕಲಬುರಗಿ : ಸಾಲದ ವಿಚಾರವಾಗಿ ಗಂಡ-ಹೆಂಡತಿಯ ಮಧ್ಯೆ ಗಲಾಟೆಯಾಗಿ ಇಬ್ಬರು ವಿಷ ಸೇವಿಸಿದ ಘಟನೆ ಕಲಬುರಗಿ ತಾಲೂಕಿನ ಸಿರನೂರ ಗ್ರಾಮದಲ್ಲಿ ನಡೆದಿದೆ. ಪತಿ ಸಾವನ್ನಪ್ಪಿದ್ದು, ಪತ್ನಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ.

ಬಸವರಾಜ್ ಅಚ್ಚಕೇರಿ (32) ಎಂಬುವರು ವಿಷ ಸೇವಿಸಿ ಮೃತಪ್ಟಿದ್ದಾರೆ. ಪತ್ನಿ ಗೀತಾ (29) ವಿಷ ಸೇವಿಸಿ ಆಸ್ಪತ್ರೆ ಸೇರಿದ್ದಾರೆ. ಗೀತಾರನ್ನ ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಲಬುರಗಿ ತಾಲೂಕಿನ ಸಿರನೂರ ಗ್ರಾಮದ‌ ನಿವಾಸಿ ಬಸವರಾಜ್ ಕೃಷಿಗಾಗಿ ಐದು ಲಕ್ಷದಷ್ಟು ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಅತಿಯಾದ ಮಳೆಯಿಂದ ಬೆಳೆ ಹಾನಿಯಾಗಿ ಸಾಲ ಮರು ಪಾವತಿಸಲು ಆಗಿರಲಿಲ್ಲ.

ಸಾಲದ ಹಿನ್ನೆಲೆ ಗಂಡ-ಹೆಂಡತಿಯ ಮಧ್ಯೆ ಗಲಾಟೆ ನಡೆದಿದೆ. ಇದೇ ಜಗಳ ವಿಕೋಪಕ್ಕೆ ತಿರುಗಿದೆ. ಹೆಂಡತಿ ಗೀತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕುಟುಂಬಸ್ಥರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಹೆಂಡತಿ ವಿಷ ಸೇವಿಸಿರುವ ವಿಚಾರ ತಿಳಿದು, ಇತ್ತ ಗಂಡನು ವಿಷ ಸೇವನೆ ಮಾಡಿದ್ದಾರೆ. ಹೆಂಡತಿಯನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮನೆಯಲ್ಲೇ ವಿಷ ಸೇವಿಸಿದ ಬಸವರಾಜ್ ಮೃತಪಟ್ಟಿದ್ದಾರೆ. ಈ ಕುರಿತು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಮಂಗಳೂರು : ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.