ಕಲಬುರಗಿ: ಭವಿಷ್ಯದ ಭಾರತದ ಬಗ್ಗೆ ಯೋಚನೆ ಮಾಡಿದ್ರೆ ಭಯ ಆಗುತ್ತದೆ. ಶಾಲೆ ಅಂದ್ರೆ ಅಲ್ಲಿ ಸಮಾನತೆ ಕಾಣಬೇಕು ಅಂತಾ ಅಲ್ಪಸಂಖ್ಯಾತರ ಶಾಸಕರಿಗೆ ಹೇಳಿದ್ದೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ಸಂಬಂಧ ಅಲ್ಪ ಸಂಖ್ಯಾತ ಶಾಸಕ,ರು ಗೃಹ ಸಚಿವರಿಗೆ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು. ನಿನ್ನೆ ಸ್ವಲ್ಪ ಜನ ಅಲ್ಪಸಂಖ್ಯಾತ ಶಾಸಕರು ಭೇಟಿ ಮಾಡಿ ಮನವಿ ಕೊಟ್ಟಿದ್ದಾರೆ.
ನಾನು ಅವರಿಗೆ ಏನು ಹೇಳಬೇಕು ಹೇಳಿದ್ದೀನಿ, ನಾನು - ನೀವು ಎಲ್ಲರೂ ಸೇರಿ ಈ ಸ್ಥಿತಿಯಿಂದ ಹೊರ ತರಬೇಕು. ಶಾಲೆ ಅಂದ್ರೆ ಅಲ್ಲಿ ಸಮಾನತೆ ಕಾಣಬೇಕು ಅಂತಾ ಹೇಳಿದ್ದೇನೆ. ಭವಿಷ್ಯದ ಭಾರತದ ಬಗ್ಗೆ ಯೋಚನೆ ಮಾಡಿದ್ರೆ ಭಯ ಆಗುತ್ತೆ. ಕೋರ್ಟ್, ಕಾಯ್ದೆ, ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು. ಅದರ ವಿರುದ್ಧ ಹೋಗುವವರನ್ನ ಖಂಡಿಸಬೇಕು ಎಂದರು.
ಸಂವಿಧಾನ,ಕೋರ್ಟ್ ನಗಣ್ಯ ಎಂದವರನ್ನ ಸುಮ್ಮನೆ ಬೀಡೋದಿಲ್ಲ: ಎಲ್ಲಾ ಕಾಲೇಜ್ನಲ್ಲಿ ಹಿಜಾಬ್ ವಿವಾದ ಇಲ್ಲ. ಕೆಲ ಬೆರಳಣಿಕೆಯಷ್ಟು ಶಾಲೆಗಳಲ್ಲಿ ಮಾತ್ರ ವಿವಾದ ಎದ್ದಿದೆ. ಹಾಗಾಗಿ, ಅವರಿಗೆ ಎಚ್ಚರಿಕೆ ಕೋಡುವಂತಹ ಕೆಲಸಗಳು ಆಗುತ್ತಿದೆ. ಕಾಲೇಜ್ ಸುತ್ತಲು 144 ಜಾರಿ ಮಾಡಿದ್ದಾರೆ, ಅದನ್ನ ಮೀರಿ ಗೊಂದಲ ಮಾಡಿದವರು ಅರೆಸ್ಟ್ ಆಗಿದ್ದಾರೆ. ಇನ್ನೂ ಕೆಲವರ ಮೇಲೆ ಎಫ್ ಐ ಆರ್ ಕೂಡ ದಾಖಲಾಗಿದೆ. ಅತಿರೇಕಕ್ಕೆ ಹೋದಾಗ ಸುಮ್ಮನೆ ಇರೋದಕ್ಕೆ ಆಗೋದಿಲ್ಲ.
ಕಾರಣ ಬೇರೆ ಬೇರೆ ಇದೆ, ಇದರ ಹಿಂದೆ ಮತಾಂಧ ಶಕ್ತಿಗಳು ಸೇರಿಕೊಂಡಿವೆ. ಮತಾಂಧ ಶಕ್ತಿಗಳಿಗೆ ಎಚ್ಚರಿಕೆ ಕೋಡುವ ಕೆಲಸ ಆಗಿದೆ. ಅವರ ವಿರುದ್ಧ ಕೇಸ್ ಕೂಡ ದಾಖಲಾಗಿದೆ. ಸಂವಿಧಾನ, ಕೋರ್ಟ್ ನಗಣ್ಯ ಅಂದವರನ್ನ ಸುಮ್ಮನೆ ಬೀಡೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈಶ್ವರಪ್ಪ ಹೇಳಿಕೆಯನ್ನ ಕಾಂಗ್ರೆಸ್ನವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ: ರಾಷ್ಟ್ರಧ್ವಜ ವಿರೋಧಿಯಾಗಿ ಈಶ್ವರಪ್ಪ ಮಾತನಾಡಿಲ್ಲ. ಶಿವಮೊಗ್ಗದಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸಿದ್ದಾರೆ ಅಂತಾ ಡಿಕೆಶಿ ಹೇಳ್ತಾರೆ. ಆದರೆ ಖಾಲಿ ಇದ್ದ ಫ್ಲಾಗ್ಪೋಲ್ಗೆ ಧ್ವಜ ಕಟ್ಟಿದ್ದಾರೆ, ಆ ಮೇಲೆ ಪೊಲೀಸರು ಹೇಳಿದ ನಂತರ ಇಳಿಸಿದ್ದಾರೆ. ಇನ್ನೂರು ಮೂನ್ನೂರು ವರ್ಷದ ನಂತರ ಕೇಂಪು ಕೋಟೆ ಮೇಲೆ ಕೇಸರಿ ಧ್ವಜ ಹಾರಿಸಬಹುದು ಅಂತಾ ಈಶ್ವರಪ್ಪ ಹೇಳಿದ್ದಾರೆ ಎಂದರು.
ಕಲಾಪದಲ್ಲಿ ಸಾಮಾನ್ಯ ಜನರ ಬಗ್ಗೆ ಚರ್ಚೆ ಆಗಬೇಕಾಗಿತ್ತು. ಅದನ್ನ ಬಿಟ್ಟು ವಿಚಾರವೇ ಇಲ್ಲದ ವಿಷಯಕ್ಕೆ ಹೋರಾಟ ಮಾಡ್ತಿದ್ದಾರೆ. ಇವರ ಪ್ರತಿಭಟನೆಯಿಂದ ಏನಾದರೂ ಒಳ್ಳೆಯದಾದರೆ ಮಾಡಲಿ. ಕಾಂಗ್ರೆಸ್ ನವರು ಯಾವ ಕಾರ್ಯಕ್ರಮ ಮಾಡ್ತಿದ್ದಾರೋ ಅದು ಬೋಗಸ್, ಒಂದು ಸುಳ್ಳನ್ನ ನೂರು ಸಾರಿ ಹೇಳಿದ್ರೆ ಸತ್ಯ ಆಗೋದಿಲ್ಲ. ಈಶ್ವರಪ್ಪ ಹೇಳಿರೋದನ್ನ ಬೇರೆ ಬೇರೆ ರೀತಿಯಲ್ಲಿ ಅರ್ಥೈಸಿಕೊಂಡಿದ್ದಾರೆ ಎಂದು ಕಿಡಿಕಾರಿದರು.