ಕಲಬುರಗಿ: ಹಿಜಾಬ್-ಕೇಸರಿ ವಿವಾದದ ಜೊತೆಗೆ ಇದೀಗ ಬಿಂದಿ ಚರ್ಚೆ ಮುನ್ನೆಲೆಗೆ ಬಂದಿದೆ. ಹಿಜಾಬ್ ವಿರೋಧಿಸಿ ಕಲಬುರಗಿಯಲ್ಲಿ ಬಿಜೆಪಿ ಮುಖಂಡೆ, ಹಿಂದೂಪರ ಸಂಘಟನೆ ಕಾರ್ಯಕರ್ತೆ ದಿವ್ಯಾ ಹಾಗರಗಿ ಅವರ ನೇತೃತ್ವದಲ್ಲಿ ಸಿಂಧೂರ ಚಳುವಳಿ ಆರಂಭಿಸಿದರು.
ಬಿಂದಿ ಹಾಕೊಂಡು ಶಾಲೆಗೆ ಬರ್ತೀರಲ್ಲಾ ಅನ್ನೋ ಮುಸ್ಲಿಂ ವಿದ್ಯಾರ್ಥಿನಿಯರ ಪ್ರಶ್ನೆಗೆ ಆಕ್ರೋಶಗೊಂಡ ಹಿಂದೂ ಮಹಿಳೆಯರು, ಇತರ ಮಹಿಳೆಯರಿಗೆ ಕೇಸರಿ ಶಾಲು ಹಾಕಿ, ಅರಿಶಿಣ- ಕುಂಕುಮ ಹಚ್ಚಿ, ಬಳೆ ಕೊಟ್ಟು ವಿನೂತನವಾಗಿ ಸಿಂಧೂರ ಚಳುವಳಿ ಮಾಡಿದ್ದಾರೆ.
ದಿವ್ಯಾ ಹಾಗರಗಿ ಮಾತನಾಡಿ, ಕುಂಕುಮದ ತಂಟೆಗೆ ಬಂದ್ರೆ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ ಆಗಬೇಕಾಗುತ್ತೆ. ಅರಿಶಿಣ, ಕುಂಕುಮ, ಹೂವು, ಬಳೆ, ಮಹಿಳೆಯರು ಮುಡಿಯೋದು. ಇದು ನಮ್ಮ ಹಿಂದು ಸಂಪ್ರದಾಯ. ಭಾರತ ಹಿಂದೂ ರಾಷ್ಟ್ರ. ಹಿಜಾಬ್ ವಿಷಯ ಕೋರ್ಟ್‌ನಲ್ಲಿದೆ, ಅದರ ಬಗ್ಗೆ ಮಾತಾಡೋದಿಲ್ಲ. ಆದರೆ, ಕುಂಕುಮ ತಂಟೆಗೆ ಬಂದ್ರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: 'ಕುಂಕುಮ, ಬಳೆ, ಗಣಪತಿ ಪೂಜೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳಿ ಹಾಕ್ತೀವಿ'