ಕಲಬುರಗಿ: ಇಲ್ಲಿನ ಅತ್ಯಂತ ಪುರಾತನ ದೇವಸ್ಥಾನದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಮೂರ್ತಿಯನ್ನು ಕಳೆದ ನವೆಂಬರ್ ನಲ್ಲಿ ದುಷ್ಕರ್ಮಿಗಳು ಮಲಿನಗೊಳಿಸಿದ್ದರು.ಶಿವಲಿಂಗ ಮೂರ್ತಿಯನ್ನು ಮಲಿನಗೊಳಿಸಿದ್ದನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಆಳಂದ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದವು. ಇದೀಗ ಅಪವಿತ್ರವಾದ ಶಿವಲಿಂಗಕ್ಕೆ ಶಿವರಾತ್ರಿಯಂದು ಜಿಲ್ಲೆಯ ಮಠಾಧೀಶರ ನೇತೃತ್ವದಲ್ಲಿ ಶುಧ್ಧೀಕರಣ ಮಾಡಲು ಆಳಂದ ಚಲೋ ಕಾರ್ಯಕ್ರಮಕ್ಕೆ ಹಿಂದು ಸಂಘಟನೆ ಕರೆ ನೀಡಿದೆ.
ಕಳೆದ ನವೆಂಬರ್ ತಿಂಗಳಿನಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಮೂರ್ತಿಯನ್ನು ದುಷ್ಕರ್ಮಿಗಳು ಮಲಿನಗೊಳಿಸಿ ವಿಕೃತಿ ಮೆರೆದಿದ್ದರು. ಶಿವಲಿಂಗವನ್ನು ಮಲಿನಗೊಳಿಸಿದ್ದನ್ನು ಖಂಡಿಸಿ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದೀಗ ಅಪವಿತ್ರಗೊಂಡ ಶಿವಲಿಂಗವನ್ನ ಶುಚಿಗೊಳಿಸಲು ಜಿಲ್ಲೆಯ ಮಠಾಧೀಶರು ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ. ಮಾರ್ಚ್ 1ರ ಶಿವರಾತ್ರಿಯಂದು ಶಿವಲಿಂಗವನ್ನು ಶುಚಿಗೊಳಿಸಲು ಹಿಂದು ಪರ ಸಂಘಟನೆಗಳು ಆಳಂದ ಚಲೋ ಅಭಿಯಾನಕ್ಕೆ ಕರೆ ನೀಡಿವೆ.
ಸಮರ್ಥ ರಾಮದಾಸರ ನವಮಿ ನಿಮಿತ್ತ ಇಂದು ಕಲಬುರಗಿಯ ರಾಮಮಂದಿರದಲ್ಲಿ ಹಿಂದುಪರ ಸಂಘಟನೆಯ ಯುವಕರು ಶಿವಮಾಲೆ ಧರಿಸಿ ಐದು ದಿನಗಳ ವೃತವನ್ನು ಕೈಗೊಳ್ಳಲಿದ್ದಾರೆ. ಐದು ದಿನಗಳ ಕಾಲ ಶಿವಮಾಲೆ ಧರಿಸಿ ವೃತವನ್ನು ಪೂರೈಸಿ ಬಳಿಕ ಆಳಂದ ಪಟ್ಟಣದ ರಾಘವ ಚೈತನ್ಯ ದೇವಸ್ಥಾನಕ್ಕೆ ತೆರಳಿ ಶಿವಮಾಲೆ ತೆಗೆದು ಶಿವಲಿಂಗವನ್ನ ಶುಚಿತ್ವಗೊಳಿಸುವ ಕಾರ್ಯದಲ್ಲಿ ಜಿಲ್ಲೆಯ ಮಠಾಧೀಶರು ಮತ್ತು ಹಿಂದುಪರ ಯುವಕರು ಭಾಗಿಯಾಗಲಿದ್ದಾರೆ.
ಶಿವರಾತ್ರಿಯಂದು ನಡೆಯುವ ಆಳಂದ ಪಟ್ಟಣದಲ್ಲಿನ ಶಿವಲಿಂಗ ಶುಚಿತ್ವ ಕಾರ್ಯಕ್ರಮಕ್ಕೆ ಐನೂರು ಜನ ಶಿವಮಾಲೆ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಐದು ಸಾವಿರ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಹೇಳಲಾಗಿದೆ.
ಇನ್ನೂ ಶಿವರಾತ್ರಿಯಂದು ನಡೆಯಲಿರುವ ಶಿವಲಿಂಗದ ಶುಚಿತ್ವ ಕಾರ್ಯಕ್ರಮದಲ್ಲಿ ಗಂಗಾ ನದಿಯಿಂದ ತಂದ ಪವಿತ್ರ ಗಂಗಾಜಲದಿಂದ ಶಿವಲಿಂಗವನ್ನು ಪೂಜೆ ಮಾಡಿ ಶುಚಿಗೊಳಿಸಲಾಗುವುದು. ಕಾರ್ಯಕ್ರಮದಲ್ಲಿ ಶಿವಮಾಲೆಯನ್ನ ಧರಿಸಿದ ಐನೂರು ಜನರು ಐದು ದಿನಗಳ ಕಾಲ ಪಾದಯಾತ್ರೆ ಮೂಲಕ ಆಳಂದ ಕಡೆ ಹೆಜ್ಜೆ ಹಾಕಲಿದ್ದಾರೆ ಎಂದು ಹೇಳಲಾಗಿದೆ.
ಆಳಂದ ಚಲೋ ಕಾರ್ಯಕ್ರಮದ ಬಗ್ಗೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಸಂಪೂರ್ಣ ಮಾಹಿತಿ ನೀಡಲಾಗಿದ್ದು, ಆಳಂದ ಚಲೋ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ನೀಡುವಂತೆ ಹಿಂದು ಸಂಘಟನೆಗಳು ಮನವಿ ಮಾಡಿದೆ ಎಂದು ತಿಳಿದು ಬಂದಿದೆ.
ಓದಿ : ರಷ್ಯಾ - ಉಕ್ರೇನ್ ಸಂಘರ್ಷ: ಉಕ್ರೇನ್ನಲ್ಲಿ 198 ನಾಗರಿಕರು ಸಾವು, ಸಾವಿರಕ್ಕೂ ಅಧಿಕ ಜನರಿಗೆ ಗಾಯ