ETV Bharat / state

ಹಿಜಾಬ್ ಹಾಗೂ ಕೇಸರಿ ವಿವಾದ : ಉರ್ದು ಶಾಲೆಗೆ ಗೈರಾದ 80ಕ್ಕೂ ಅಧಿಕ ವಿದ್ಯಾರ್ಥಿಗಳು

ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನವೊಲಿಸಲು ಪ್ರಯತ್ನಿಸಿದರೂ ಪೋಷಕರು ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗುತ್ತಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ..

hijab-kesari-fight-students-of-urdu-school-absent-for-the-class-in-kalburgi
ಹಿಜಾಬ್ ಹಾಗೂ ಕೇಸರಿ ವಿವಾದ : ಉರ್ದು ಶಾಲೆಗೆ ಗೈರಾದ 80ಕ್ಕೂ ಅಧಿಕ ವಿದ್ಯಾರ್ಥಿಗಳು
author img

By

Published : Feb 15, 2022, 12:25 PM IST

ಕಲಬುರಗಿ : ಹಿಜಾಬ್ ಹಾಗೂ ಕೇಸರಿ ವಿವಾದದ ಹಿನ್ನೆಲೆ ಉರ್ದು ಶಾಲೆಗೆ ಹೈಸ್ಕೂಲ್ ವಿದ್ಯಾರ್ಥಿನಿಯರು ಗೈರಾದ ಘಟನೆ ನಗರದ ಜಗತ್ ವೃತ್ತದ ಬಳಿಯಿರುವ ಉರ್ದು ಶಾಲೆಯಲ್ಲಿ ನಡೆದಿದೆ. ಶಾಲೆಗೆ ರಜೆ ಇಲ್ಲದಿದ್ದರೂ ವಿದ್ಯಾರ್ಥಿಗಳು ತರಗತಿಗೆ ಗೈರಾಗಿರುವುದು ಶಿಕ್ಷಕರಿಗೆ ಇನ್ನಷ್ಟು ತಲೆನೋವು ತಂದಿದೆ.

ನ್ಯಾಯಾಲಯವು ಶಾಲೆಯಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಬಳಸಬಾರದು ಎಂಬ ಆದೇಶ ನೀಡಿದ ಹಿನ್ನೆಲೆಯಲ್ಲಿ ಕಲಬುರಗಿಯ ಉರ್ದು ಶಾಲೆಯ 8, 9 ಮತ್ತು10ನೇ ತರಗತಿಯ 80ಕ್ಕೂ ಅಧಿಕ ವಿದ್ಯಾರ್ಥಿಗಳು ತರಗತಿಗೆ ಗೈರಾಗಿದ್ದಾರೆ‌.

ಹೀಗಾಗಿ, ಉರ್ದು ಶಾಲೆಯ ಕ್ಲಾಸ್ ರೂಮ್‌ಗಳೆಲ್ಲಾ ಬಣಗುಡುತ್ತಿವೆ. ಶಾಲೆಯ ಶಿಕ್ಷಕರು ಎಂದಿನಂತೆ ಶಾಲೆಗೆ ಆಗಮಿಸಿದ್ದರೂ ಪೋಷಕರು ಮಾತ್ರ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಶಿಕ್ಷಕರು ಹೇಳಿದ್ದಾರೆ.

ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತದೆ. ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಮನವೊಲಿಸಲು ಪ್ರಯತ್ನಿಸಿದರೂ ಪೋಷಕರು ಮಾತ್ರ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗುತ್ತಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ.

ಇನ್ನು ನಗರದ ಶಾಲೆಗಳಲ್ಲಿ ಹಿಜಾಬ್ ಸಂಸ್ಕ್ರತಿ ಮುಂದುವರೆದಿದೆ. ಹೈಕೋಟ್೯ ಆದೇಶದ ನಡುವೆಯೂ ಪೋಷಕರು ಮಕ್ಕಳಿಗೆ ಹಿಜಾಬ್ ಹಾಕಿ ಶಾಲೆಗೆ ಕಳುಹಿಸುತ್ತಿದ್ದಾರೆ‌. ನಗರದ ನ್ಯೂ ನೋಬೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿ ನೂರಕ್ಕು ಅಧಿಕ ಮಕ್ಕಳು ಹಿಜಾಬ್ ಧರಿಸಿ ಶಾಲೆಗೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.