ETV Bharat / state

ಕಲಬುರಗಿ ಕಾರಾಗೃಹಕ್ಕೆ ಜಸ್ಟಿಸ್ ಬಿ ವೀರಪ್ಪ ಭೇಟಿ, ಪರಿಶೀಲನೆ - High Court Justice B Veerappa

ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜಸ್ಟಿಸ್ ಬಿ ವೀರಪ್ಪ ಅವರು ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿದ್ದಾರೆ.

ಕಲಬುರಗಿ ಕಾರಾಗೃಹಕ್ಕೆ ಜಸ್ಟಿಸ್ ಬಿ ವೀರಪ್ಪ ಭೇಟಿ, ಪರಿಶೀಲನೆ

author img

By

Published : Sep 25, 2022, 6:38 PM IST

ಕಲಬುರಗಿ: ಕಳೆದ ಎರಡು ದಿನಗಳಿಂದ ಕಲಬುರಗಿ ಜಿಲ್ಲೆಯ ಪ್ರವಾಸದಲ್ಲಿರುವ ಹೈಕೋರ್ಟ್​ನ ಹಿರಿಯ ನ್ಯಾಯಮೂರ್ತಿ ಹಾಗೂ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಜಸ್ಟಿಸ್ ಬಿ ವೀರಪ್ಪ ನಗರದ ಕೇಂದ್ರ ಕಾರಾಗೃಹಕ್ಕೆ ದಿಢೀರ್​ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರಾಗೃಹದಲ್ಲಿ ಕೈದಿಗಳಿಗೆ ಕೊಡುವ ಆಹಾರ ಸೇರಿದಂತೆ ಜೈಲಲ್ಲಿರುವ ಸೌಲಭ್ಯಗಳನ್ನು ನ್ಯಾಯಮೂರ್ತಿಗಳು ಪರಿಶೀಲಿಸಿದರು. ಕೈದಿಗಳ ಆಹಾರ ತಯಾರಿಸುವ ಸ್ಥಳಕ್ಕೆ ತೆರಳಿ ಸ್ವಚ್ಛತೆ, ಆಹಾರ ಪದಾರ್ಥಗಳನ್ನು ಪರಿಶೀಲನೆ ಮಾಡಿದ ನ್ಯಾಯಮೂರ್ತಿಗಳು, ಸ್ವತಃ ತಾವೇ ಕೈಯಲ್ಲಿ ಮುಟ್ಟಿ ಸಾಂಬಾರ್​ ಗುಣಮಟ್ಟ ಪರೀಕ್ಷಿಸಿದರು.

ಕಲಬುರಗಿ ಕಾರಾಗೃಹಕ್ಕೆ ಜಸ್ಟಿಸ್ ಬಿ ವೀರಪ್ಪ ಭೇಟಿ, ಪರಿಶೀಲನೆ

ಬಳಿಕ ಕೈದಿಗಳಿಗೆ ನೀಡುವ ಆಹಾರವನ್ನು ನ್ಯಾಯಮೂರ್ತಿಗಳೇ ಸ್ವತಃ ಸೇವಿಸಿ ಗುಣಮಟ್ಟ ಪರಿಶೀಲನೆ ಮಾಡಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಜೈಲು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಓದಿ: ಎಸ್​ ಎಂ ಕೃಷ್ಣ ಆರೋಗ್ಯ ವಿಚಾರಿಸಿದ ಬಿ ಎಸ್ ಯಡಿಯೂರಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.