ಕಲಬುರಗಿ : ಜನರು ಲಾಠಿ ಏಟಿಗೆ ಹೆದರಲಿಲ್ಲ, ವಾಹನ ಸೀಜ್ ಮಾಡಿದರೂ ಕ್ಯಾರೆ ಎನ್ನಲಿಲ್ಲ. ಆದರೆ, ಬಿಸಿಲಿನ ತಾಪ ಹೆಚ್ಚಾದಂತೆ ಮನೆ ಸೇರಿದ್ದಾರೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ಫೀಲ್ಡ್‌ಗೆ ಇಳಿದ ಪೊಲೀಸ್ ಪಡೆ ಅನಗತ್ಯ ರಸ್ತೆಗೆ ಇಳಿದ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಅಲ್ಲದೆ ಸರ್ಕಾರಿ ನಿಯಮ ಉಲ್ಲಂಘಿಸಿ ಅನಗತ್ಯ ಓಡಾಟದಲ್ಲಿ ತೊಡಗಿದ ಜನರಿಗೆ ಲಾಠಿ ರುಚಿ ತೋರಿಸುತ್ತಿದಾರೆ. ಇಷ್ಟಿದ್ದರೂ ಜನ ಓಡಾಟ ಕಂಡು ಬರುತಿತ್ತು.
ಆದ್ರೆ, ಮಧ್ಯಾಹ್ನದ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಜನ ಸ್ವಯಂ ಪ್ರೇರಿತರಾಗಿ ಮನೆ ಸೇರಿದ್ದು ಕಂಡು ಬಂತು. ಇಂದು ಗರಿಷ್ಠ 38 ಡಿಗ್ರಿ ತಾಪಮಾನ ದಾಖಲಾಗಿದೆ. ಅಗತ್ಯ ಸೇವೆಗೆ ಸಂಬಂಧಿಸಿದಂತೆ ಬೆರಳೆಣಿಕೆಯ ವಾಹನ ಹೊರತು ಪಡೆಸಿದರೆ ರಸ್ತೆಗಳು ಸಂಪೂರ್ಣ ಬಿಕೋ ಎನ್ನುತ್ತಿವೆ.
ಮಧ್ಯಾನವು ಸಡಿಲ ಬಿಡದ ಪೊಲೀಸರು ವಾಹನಗಳನ್ನು ಕಡ್ಡಾಯವಾಗಿ ತಪಾಸಣೆಗೈದು, ಅನಗತ್ಯ ಎಂದು ಕಂಡು ಬಂದರೆ ಅವುಗಳನ್ನು ಸೀಜ್ ಮಾಡುತ್ತಿದ್ದಾರೆ.