ಕಲಬುರಗಿ: ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಮಳೆಯ ಅಬ್ಬರಕ್ಕೆ ಚುನಾವಣೆಗೆ ನಿಯೋಜನೆಗೊಂಡಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಪರದಾಡುವಂತಾಗಿದೆ. ಚುನಾವಣಾ ಕೇಂದ್ರದಲ್ಲಿದ್ದ ಬೃಹದಾಕಾರದ ಮರ ನೆಲಕ್ಕುರುಳಿದ ಪರಿಣಾಮ ಮತ ಕೇಂದ್ರದಲ್ಲಿ ಹಾಕಿದ್ದ ಟೆಂಟ್ ಮುರಿದುಬಿದ್ದು, ಖುರ್ಚಿಗಳು ಚೆಲ್ಲಾಪಿಲ್ಲಿಯಾಗಿರುವ ಘಟನೆ ನಡೆದಿದೆ.
ಆಳಂದ ಪಟ್ಟಣದ ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ನಾಳಿನ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಅಧಿಕಾರಿ ಸಿಬ್ಬಂದಿ ಕೇಂದ್ರಕ್ಕೆ ಆಗಮಿಸಿದ್ದರು. ಮತದಾನಕ್ಕೆ ಬರುವ ಜನರಿಗೆ ಮತ್ತು ಅಧಿಕಾರಿ ಸಿಬ್ಬಂದಿಗಾಗಿ ವೋಟಿಂಗ್ ಸೆಂಟರ್ನಲ್ಲಿ ಟೆಂಟ್ ಹಾಕಿ ಖುರ್ಚಿಗಳನ್ನು ಹಾಕಲಾಗಿತ್ತು. ಆದ್ರೆ ವರುಣನ ಆರ್ಭಟದಿಂದ ಮತ ಕೇಂದ್ರದಲ್ಲಿನ ಬೃಹತ್ ಮರ ನೆಲಕ್ಕುರುಳಿದೆ. ಟೆಂಟ್ ಸಂಪೂರ್ಣ ಹಾಳಾಗಿದ್ದು, ಮತದಾನ ಕೇಂದ್ರದಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇದರಿಂದ ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಪರದಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಮತಗಟ್ಟೆಯತ್ತ ಸಿಬ್ಬಂದಿ: ಕಾಡಂಚಿನ ಗ್ರಾಮಗಳಿಗೆ ಜೀಪ್ ವ್ಯವಸ್ಥೆ- ಭೂರಿ ಭೋಜನ