ಕಲಬುರಗಿ: ಇಂದು ಕಲಬುರಗಿ ಜಿಲ್ಲಾ ಪ್ರವಾಸದಲ್ಲಿರುವ ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡರು ಪ್ರಸಿದ್ಧ ದತ್ತಾತ್ರೆಯ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದತ್ತನ ದರ್ಶನ ಪಡೆದರು.
ದೇವಾಲಯಕ್ಕೆ ಬಂದ ದೇವೇಗೌಡರನ್ನು ಅರ್ಚಕರು ಬರಮಾಡಿಕೊಂಡರು. ನಂತರ ಗೌಡರು, ದತ್ತ ಸನ್ನಿಧಿಯಲ್ಲಿನ ಸ್ವರ್ಣ ಪಾದುಕೆಗೆ ವಿಶೇಷ ಪೂಜೆ ಸಲ್ಲಿಸಿದರು. ಉಪಚುನಾವಣೆ ನಾಮಪತ್ರ ಆರಂಭಗೊಳ್ಳುತ್ತಿರುವ ದಿನದಂದೇ ದತ್ತನ ದರ್ಶನ ಪಡೆದಿರುವ ಗೌಡರು, ಜೆಡಿಎಸ್ ಪಕ್ಷದ ಸಂಕಷ್ಟಗಳನ್ನು ದೂರ ಮಾಡುವಂತೆ ದೇವರಲ್ಲಿ ಪ್ರಾರ್ಥಿಸಿದರು.
ದೇವಾಲಯ ಭೇಟಿ, ದರ್ಶನದ ವೇಳೆ ದೊಡ್ಡಗೌಡರಿಗೆ ಸ್ಥಳೀಯ ಜೆಡಿಎಸ್ ಮುಖಂಡರು ಸಾಥ್ ನೀಡಿದ್ರು.