ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ವಿದ್ಯಾರ್ಥಿಗಳ ಶೋಷಣೆ ನಡೆಯುತ್ತಿದೆ ಎಂಬ ಆರೋಪಗಳಿದ್ದು ಅಧ್ಯಾಪಕರಿಗೆ ಕುಲಪತಿಪ್ರೊ.ಎಸ್.ಆರ್.ನಿರಂಜನ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಟಯಲ್ಲಿ ಮಾತನಾಡಿದ ಅವರು, ಪಿಹೆಚ್ಡಿ ವಿದ್ಯಾರ್ಥಿಗಳ ಮೇಲೆ ಶೋಷಣೆ ನಡೆಯುತ್ತಿರುವ ಬಗ್ಗೆದಾಖಲೆ ಸಮೇತ ದೂರು ನೀಡಿದಲ್ಲಿ ತಪ್ಪಿತಸ್ಥ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪಿಹೆಚ್ಡಿ ವಿದ್ಯಾರ್ಥಿಗಳಿಂದ ಪ್ರಾಧ್ಯಾಪಕರು ಹಣ ಪಡೆದು ಶೋಷಣೆ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆದರೆ ಈ ಕುರಿತು ಯಾವೊಬ್ಬ ವಿದ್ಯಾರ್ಥಿಯೂ ತಮಗೆ ದೂರು ನೀಡಿಲ್ಲ. ಯಾರಾದರೂ ಪ್ರಾಧ್ಯಾಪಕರಿಗೆ ಬ್ಯಾಂಕ್ಗೆ ಹಣ ಹಾಕಿದ್ದ ಅಥವಾ ಚೆಕ್ ಮೂಲಕ ಹಣ ನೀಡಿದ ಬಗ್ಗೆ ದಾಖಲೆ ನೀಡಿದರೆ ಖಂಡಿತ ಅದನ್ನು ಪಡೆದವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ.ದೂರು ನೀಡದ ಹೊರತು ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಪ್ರೊ. ನಿರಂಜನ್ ಸ್ಪಷ್ಟಪಡಿಸಿದರು.