ETV Bharat / state

ಅಂಗವೈಕಲ್ಯ ಮೆಟ್ಟಿನಿಂತು ಜೀವನ ಕಟ್ಟಿಕೊಂಡ ಯುವಕ : ನಾಟಿ ಕೋಳಿ ಫಾರಂ ಉದ್ಯಮ ಆರಂಭಿಸಿ ಯಶಸ್ಸು

author img

By

Published : Aug 14, 2023, 7:58 PM IST

Updated : Aug 14, 2023, 8:07 PM IST

ಕಲಬುರಗಿಯ ವಿಶೇಷ ಚೇತನ ವ್ಯಕ್ತಿ ಉದ್ಯಮ ಆರಂಭಿಸಿ ಮಾಸಿಕ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

ಉದ್ಯಮದಲ್ಲಿ ಯಶಸ್ಸುಕಂಡ ನಿತೀನ್​
ಉದ್ಯಮದಲ್ಲಿ ಯಶಸ್ಸುಕಂಡ ನಿತೀನ್​

ಉದ್ಯಮದಲ್ಲಿ ಯಶಸ್ಸು ಕಂಡ ವಿಶೇಷ ಚೇತನ

ಕಲಬುರಗಿ: ಅವರು ಹುಟ್ಟಿನಿಂದ ವಿಶೇಷ ಚೇತನ ಆದ್ರೂ ಸ್ವಾವಲಂಬಿ ಜೀವನದ ಛಲತೊಟ್ಟು ಬದುಕು ಕಟ್ಟಿಕೊಂಡ ವ್ಯಕ್ತಿ. ಜೀವನೋಪಾಯಕ್ಕೆಂದು ಕಂಡುಕೊಂಡ ದಾರಿಯಲ್ಲಿಯೇ ಉತ್ತಮ ಸಾಧನೆ ಮಾಡುವ ಮೂಲಕ‌ ಗಮನ ಸೆಳೆದ ವಿಶೇಷ ವ್ಯಕ್ತಿ. ನಾಟಿ‌ ಕೋಳಿ ಫಾರಂ‌ ಕುರಿತಾಗಿ ತರಬೇತಿ ನೀಡಿ ಆದಾಯ ಗಳಿಸೋದು ಹೇಗೆ ಅನ್ನೋದು ಜನರಿಗೆ ತಿಳಿಸಿ ಕೊಡ್ತಾರೆ. ಜೊತೆಗೆ ಖುದ್ದು ತಾವೇ ನಾಟಿ‌ ಕೋಳಿ ಫಾರಂ ಮಾಡಿಕೊಂಡು ಒಳ್ಳೆ ಸಂಪಾದನೆ‌‌ ಕೂಡಾ ಮಾಡ್ತಿದ್ದಾರೆ.

ಹೌದು, ಕಲಬುರಗಿ ನಿವಾಸಿಯಾದ ನಿತೀನ್ ರಂಗದಾಳ ಹುಟ್ಟಿನಿಂದ ದೈಹಿಕವಾಗಿ ಅಂಗವೈಕಲ್ಯತೆಯಿಂದ ಬಳಲುತ್ತಿರುವ ವ್ಯಕ್ತಿ, ಆದ್ರೂ ತಾನೊಬ್ಬ ವಿಶೇಷ ಚೇತನ ಅನ್ನೋದನ್ನು ಬದಿಗಿಟ್ಟು ಮೈಕೈ ಗಟ್ಟಿ ಇರುವ ಯುವಕರಂತೆ ಒಳ್ಳೆ ಸಾಧನೆ‌ ಮಾಡಿ ತೋರಿಸಿದ್ದಾರೆ. ಎಸ್​ಎಸ್​ಎಲ್​ಸಿ ವರೆಗೆ ಓದಿದ ನಿತೀನ್​​, ನಾಟಿ‌ ಕೋಳಿ ಫಾರಂ ಸ್ಥಾಪಿಸುವುದು, ಅವುಗಳ ನಿರ್ವಹಣೆ, ಆದಾಯದ‌ ಮಾರ್ಗದ ಬಗ್ಗೆ ತರಬೇತಿ ನೀಡುವ ಮೂಲಕ ತಮ್ಮ ಜೀವನದ ಜೊತೆಗೆ ಇತರರ ಜೀವನ ಕಟ್ಟುವ ಕೆಲಸ ಮಾಡುತ್ತಿದ್ದಾರೆ.‌‌

147 ನಾಟಿ ಕೋಳಿ ಫಾರಂ: ಕರ್ನಾಟಕ ಹಾಗೂ ಪಕ್ಕದ ಮಹಾರಾಷ್ಟ್ರದಲ್ಲಿ ಇವರ ಮಾರ್ಗದರ್ಶನದಲ್ಲಿ ಈಗಾಗಲೇ 147 ನಾಟಿ ಕೋಳಿ ಫಾರಂಗಳು ಕಾರ್ಯನಿರ್ವಹಿಸುತ್ತಿವೆ. ಕಡಿಮೆ ಖರ್ಚಿನಲ್ಲಿ ನಾಟಿ ಕೋಳಿ ಸಾಕಾಣಿಕೆ ಮಾಡಿ ಉತ್ತಮ ಲಾಭ ಪಡೆಯುವದರ ಬಗ್ಗೆ ಆಸಕ್ತರಿಗೆ ತರಬೇತಿ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.‌ ಬಾಯ್ಲರ್ ಕೋಳಿಗಿಂತ ನಾಟಿ ಕೋಳಿ‌ ಆರೋಗ್ಯಕ್ಕೆ ಒಳ್ಳೆಯ ಆಹಾರ. ಹೀಗಾಗಿ ನಾಟಿ ಕೋಳಿ ಉತ್ಪನ್ನ‌ ಹೆಚ್ಚಿಸುವುದರ ಜೊತೆಗೆ ನಿರುದ್ಯೋಗಿಗಳು ಸ್ವಯಂ ಉದ್ಯೋಗಸ್ಥರಾಗಲು ಇದೊಂದು ಉತ್ತಮ ಮಾರ್ಗ, ಹೀಗಾಗಿ ತರಬೇತಿ ನೀಡುವ ಕೆಲಸ ಮಾಡ್ತಿದ್ದೇನೆ ಅನ್ನೋ ಮಾತು ನಿತೀನ್​ ಅವರದ್ದು.

ಮಾಸಿಕ ಒಂದು ಲಕ್ಷ ರೂ. ಸಂಪಾದನೆ: ಈ ಮೊದಲು ಚಿನ್ನದ ವ್ಯಾಪಾರ ಮಾಡಿದ್ದ ನಿತೀನ್​ ಅದರಲ್ಲಿ ಅಷ್ಟೊಂದು ಯಶಸ್ಸು ಕಾಣಲಿಲ್ಲ. ಏನಾದ್ರೂ ಕೇಲಸ ಮಾಡಬೇಕು ಅದು ತನ್ನೊಂದಿಗೆ ಸಮಾಜಕ್ಕೆ ಹಾಗೂ ಇತರರ ಜೀವನ ಕಟ್ಟಬಲ್ಲ ಕೆಲಸ ಆಗಿರಬೇಕೆಂದು ಹಂಬಲ ತೊಟ್ಟು ನಾಟಿ ಕೋಳಿ ಫಾರಂ ಕುರಿತಾಗಿ ತರಬೇತಿ ನೀಡುವ ಕೆಲಸ ಆರಂಭಿಸಿ ಯಶಸ್ಸು ಕಂಡಿದ್ದಾರೆ. ಅಲ್ಲದೆ ಕಲಬುರಗಿ ಹತ್ತಿರದ ಗಣಜಲಖೇಡ ಗ್ರಾಮದಲ್ಲಿ ಸ್ವಂತ ನಾಟಿ ಕೋಳಿ ಫಾರಂ ಮಾಡಿ ಕೋಳಿಗಳ ಸಾಕಾಣಿಕೆಯಿಂದ ಕೈ ತುಂಬ ಸಂಪಾದನೆ ಮಾಡ್ತಿದ್ದಾರೆ. 500 ನಾಟಿಕೋಳಿಯಿಂದ ಸಾಕಾಣಿಕೆ ಪ್ರಾರಂಭಿಸಿ ಇಂದು ಸರಾಸರಿ ಖರ್ಚು ವೆಚ್ಚ ತೆಗೆದು ಮಾಸಿಕ 50 ರಿಂದ 60 ಸಾವಿರ ಸಂಪಾದನೆ ಜೊತೆಗೆ ತರಬೇತಿಯಿಂದ ಬರುವ ಲಾಭ ಸೇರಿ ತಿಂಗಳಿಗೆ ಲಕ್ಷ ರೂ.ಗಳಲ್ಲಿ ಸಂಪಾದನೆ ಮಾಡ್ತಿದ್ದಾರಂತೆ.

ಆನಲೈನ್ ಬ್ಯುಸಿನೆಸ್: ಸದ್ಯ ಆನಲೈನ್ ಬ್ಯುಸಿನೆಸ್​ಗೆ ಹೆಚ್ಚಿನ ಆದ್ಯತೆ ಇರುವ ಕಾರಣ ಆನ್‌ಲೈನ್ ಲೋಕಕ್ಕೂ‌ ಕಾಲಿಟ್ಟಿದ್ದಾರೆ. ವಾಟ್ಸಪ್ ಗ್ರೂಪ್‌ಗಳನ್ನು ಮಾಡಿ ಆನ್‌ಲೈನ್ ತರಬೇತಿ ನೀಡುವುದನ್ನು ಸಹ‌ ಪ್ರಾರಂಭಿಸಿದ್ದಾರೆ. ಕೈಕಾಲು ಗಟ್ಟಿ ಇದ್ದರೂ ಕೆಲವರು ಕೆಲಸಕ್ಕೆ ಹಿಂದೇಟು ಹಾಕುವ ಇಂದಿನ ದಿನಮಾನಗಳಲ್ಲಿ ಅಂಗವೈಕಲ್ಯತೆ ಮೆಟ್ಟಿನಿಂತು ತಮ್ಮ ಜೀವನ ಕಟ್ಟಿಕೊಂಡಿದ್ದಲ್ಲದೆ ಇತರರ ಜೀವನ ಕಟ್ಟಿಕೊಟ್ಟು ಜೊತೆಗೆ ಸಮಾಜದ ಸ್ವ್ಯಾಸ್ಥ ಕಾಪಾಡುವ ಕಾಯಕ ಮಾಡುತ್ತಿರುವ ನಿತೀನ್ ಅವರ ಕಾಯಕ ನಿಜಕ್ಕೂ‌ ಮೆಚ್ಚುವಂತಹದ್ದು.

ಇದನ್ನೂ ಓದಿ: ಅಂಗವೈಕಲ್ಯತೆ ಮೀರಿ ಟೆನ್​ಪಿನ್ ಬೌಲಿಂಗ್​ನಲ್ಲಿ ರಾಷ್ಟ್ರಮಟ್ಟದ ಸಾಧನೆ!; ಸಾಧಕನಿಗೆ ಬೇಕಿದೆ ಸಹೃದಯರ ನೆರವು

Last Updated : Aug 14, 2023, 8:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.