ETV Bharat / state

ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ.. ಕಲಬುರಗಿ ವಿಹೆಚ್‌ಪಿ ಮುಖಂಡನಿಗೆ ನೋಟಿಸ್ - ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ

ಗಾಳಿಯಲ್ಲಿ ಗುಂಡು ಹಾರಿಸಿದ ಪ್ರಕರಣ ಸಂಬಂಧ ಕಲಬುರಗಿ ವಿಹೆಚ್‌ಪಿ ಮುಖಂಡನಿಗೆ ವಿವರಣೆ ನೀಡುವಂತೆ ದಕ್ಷಿಣ ವಿಭಾಗದ ಪೊಲೀಸ್​​ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ.

Vishwa Hindu Parishad leader Lingarajappa Appa
ವಿಶ್ವ ಹಿಂದೂ ಪರಿಷತ್ ಮುಖಂಡ ಲಿಂಗರಾಜಪ್ಪ ಅಪ್ಪ
author img

By

Published : Oct 9, 2022, 12:17 PM IST

ಕಲಬುರಗಿ: ಗಾಳಿಯಲ್ಲಿ ಗುಂಡು ಹಾರಿಸಿ ಬನ್ನಿ ಮುಡಿದ ವಿಶ್ವ ಹಿಂದೂ ಪರಿಷತ್ ಮುಖಂಡ ಲಿಂಗರಾಜಪ್ಪ ಅಪ್ಪ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ.

ಆಯುಧ ಪೂಜೆ ದಿನದಂದು ಲಿಂಗರಾಜಪ್ಪ ಅಪ್ಪ ಒಂದು ಬಂದೂಕು ಹಾಗೂ ಒಂದು ಪಿಸ್ತೂಲ್ ಮೂಲಕ ಸುಮಾರು 8 ಬಾರಿ ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ವೈರಲ್ ಆಗಿತ್ತು. ಈ ಕುರಿತು ಸಾಕಷ್ಟು ಪರ ವಿರೋಧ ಚರ್ಚೆಗಳ ನಡುವೆ ಇದೀಗ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ‌.

ಶಸ್ತ್ರಾಸ್ತ್ರ ಕಾಯ್ದೆ ಮತ್ತು ನಿಯಮಗಳ ಉಲ್ಲಂಘನೆ ಹಿನ್ನೆಲೆ ದಕ್ಷಿಣ ವಿಭಾಗದ ಪೊಲೀಸ್​​ ಸಹಾಯಕ ಆಯುಕ್ತರು ನೋಟಿಸ್ ನೀಡಿದ್ದಾರೆ. ಫೈರ್ ಮಾಡಲಾದ ಗನ್ ಮತ್ತು ಪಿಸ್ತೂಲ್​​ಗಳ ಪರವಾನಗಿ ಪ್ರತಿ ಸಲ್ಲಿಸುವಂತೆ ಹಾಗೂ ಗುಂಡು ಹಾರಿಸಿದ ಬಗ್ಗೆ ವಿವರಣೆ ನೀಡುವಂತೆ ನೋಟಿಸ್​​ನಲ್ಲಿ ಸೂಚಿಸಲಾಗಿದೆ.

ಇದನ್ನೂ ಓದಿ: ಗಾಳಿಯಲ್ಲಿ ಗುಂಡು ಹಾರಿಸಿ ಬನ್ನಿ ಮುಡಿದ ಕಲಬುರಗಿ ವಿಹೆಚ್​ಪಿ ಮುಖಂಡ: ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.