ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ಮಾಜಿ ಕುಲಸಚಿವ ಡಾ.ಸಂಜೀವ್ ಕುಮಾರ್ (44) ಕೊವಿಡ್ ಗೆ ಬಲಿಯಾಗಿದ್ದಾರೆ.
ಸಂಜೀವ್ ಕುಮಾರ್ ಅವರು ಚಿಕ್ಕ ವಯಸ್ಸಿನಲ್ಲಿಯೇ ಕುಲಸಚಿವ ಹುದ್ದೆಯನ್ನು ಅಲಂಕರಿಸಿ ಗಮನ ಸೆಳೆದಿದ್ದರು.
ಸಂಜೀವ್ ಕುಮಾರ್, ಗುಲಬರ್ಗಾ ವಿವಿ ಮೌಲ್ಯಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಕಳೆದ ಕೆಲ ತಿಂಗಳ ಹಿಂದಷ್ಟೇ ಹುದ್ದೆಯಿಂದ ನಿರ್ಗಮಿಸಿದ್ದ ಡಾ.ಸಂಜೀವ್ ಕುಮಾರ್ ಸದ್ಯ ವಿಜಯಪುರ ಮಹಿಳಾ ವಿವಿಯ ಎಂಬಿಎ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಎರಡು ವಾರದ ಹಿಂದೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆ ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದ್ದಿದ್ದಾರೆ.
ವಾರದ ಹಿಂದಷ್ಟೇ ಸಂಜೀವ್ ಕುಮಾರ್ ತಂದೆ ಕೂಡಾ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ತಂದೆ ಸತ್ತ ಸುದ್ದಿಯನ್ನು ಕೂಡಾ ಸಂಜೀವ್ ಕುಮಾರ್ ಅವರಿಗೆ ಕುಟುಂಬದವರು ತಿಳಿಸಿರಲಿಲ್ಲ. ಒಂದೇ ವಾರದಲ್ಲಿ ಕೊರೊನಾ ಗೆ ತಂದೆ ಮಗ ಸಾವನಪ್ಪಿದ್ದಾರೆ.