ETV Bharat / state

ಪ್ರತ್ಯೇಕ ಘಟನೆ; ಕ್ಷುಲ್ಲಕ ಕಾರಣಕ್ಕೆ ಅಜ್ಜನನ್ನು ಕೊಂದ ಮೊಮ್ಮಗ: ಬಸ್-ಬೈಕ್ ಅಪಘಾತದಲ್ಲಿ ಇಬ್ಬರು ಸಾವು - Grandson kills grandfather

ಕ್ಷುಲ್ಲಕ ಕಾರಣಕ್ಕೆ ಮೊಮ್ಮಗನೊಬ್ಬ ಸ್ವಂತ ಅಜ್ಜನನ್ನೇ ಕೊಲೆಗೈದರೆ, ಬಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಿಂದ ಬರ್ತ್​ ಡೇ ಪಾರ್ಟಿಗೆ ಹೊರಟಿದ್ದ ಸ್ನೇಹಿತರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By ETV Bharat Karnataka Team

Published : Nov 30, 2023, 2:05 PM IST

ಕಲಬುರಗಿ: ಹೆತ್ತ ತಾಯಿಗೆ ನಿಂದಿಸಿದ ಎಂಬ ಕ್ಷುಲ್ಲಕ ಕಾರಣಕ್ಕೆ ಸ್ವಂತ ಅಜ್ಜನನ್ನೇ ಮೊಮ್ಮೆಗನೊಬ್ಬ ಬರ್ಬವಾಗಿ ಹತ್ಯೆಗೈದ ಘಟನೆ ಕಲಬುರಗಿ ತಾಲೂಕಿನ ಜವಳಗಾ (ಬಿ) ಗ್ರಾಮದಲ್ಲಿ ನಡೆದಿದೆ. ಸಿದ್ರಾಮಪ್ಪ (74) ಕೊಲೆಯಾದ ಅಜ್ಜ. ಆಕಾಶ್ (22) ಕೊಲೆಗೈದ ಆರೋಪಿ.

ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆಕಾಶನ ತಾಯಿ ಸರೋಜಮ್ಮಳಿಗೆ ಸಿದ್ರಾಮಪ್ಪ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರಿಂದಲೇ ಈ ಕೊಲೆಗೆ ಕಾರಣ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸೋಮವಾರ ಸಿದ್ರಾಮಪ್ಪನ ಸಹೋದರಿ ಮೃತಪಟ್ಟ ಹಿನ್ನೆಲೆ ಕುಟುಂಬಸ್ಥರೆಲ್ಲ ಸೇರಿ ಕುಮಸಿ ಗ್ರಾಮಕ್ಕೆ ತೆರಳಿದ್ದರು. ಅಂತ್ಯಕ್ರಿಯೆ ಮುಗಿಸಿ ಕ್ರೂಸರ್ ವಾಹನದಲ್ಲಿ ವಾಪಸ್ ಬರುವಾಗ ಸರೋಜಮ್ಮ ಅವರು ಸಿದ್ರಾಮಪ್ಪನಿಗೆ ಗಾಡಿಯ ಮೇಲೆ (ಟಾಪ್) ಕೂರುವಂತೆ ಹೇಳಿದ್ದರು.

ವಯಸ್ಸಾದವನಿಗೆ ಗಾಡಿಯ ಮೇಲೆ ಕೂರುವಂತೆ ಹೇಳ್ತಿಯಾ ಅಂತ ಸಿದ್ರಾಮಪ್ಪ ಸರೋಜಮ್ಮಳಿಗೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದರು. ಈ ವಿಷಯವನ್ನು ಸರೋಜಮ್ಮ ತನ್ನ ಮಗನಿಗೆ ಹೇಳಿದ್ದರು. ಇದೇ ಕಾರಣದಿಂದ ರೊಚ್ಚಿಗೆದ್ದ ಮಗ ಆಕಾಶ್ ತನ್ನ ಅಜ್ಜನನ್ನು ಕೊಲೆ ಮಾಡಿರುವುದಾಗಿ ಪೊಲೀಸ್​ ಮೂಲಗಳು ತಿಳಿಸಿವೆ. ಸದ್ಯ ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಆರೋಪಿ ಆಕಾಶನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

ಬಸ್-ಬೈಕ್ ಮುಖಾಮುಖಿ ಡಿಕ್ಕಿಯಿಂದ ಇಬ್ಬರು ಸಾವು: ಸಾರಿಗೆ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸ್ನೇಹಿತರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಜೇವರ್ಗಿ ಹೆದ್ದಾರಿಯ ಕಟ್ಟಿಸಂಗಾವಿ ಬಳಿ ನಡೆದಿದೆ. ಯಾದಗಿರಿ ಜಿಲ್ಲೆ ಶಹಾಪುರ ಪಟ್ಟಣದ ನಿವಾಸಿಗಳಾದ ಪ್ರಜ್ವಲ್ (22) ಮತ್ತು ಶಶಿಕುಮಾರ್ (21) ಮೃತರು ಎಂದು ಗುರುತಿಸಲಾಗಿದೆ. ಇಬ್ಬರು ಜೊತೆಗೂಡಿ ಬೈಕ್ ಮೇಲೆ ಸ್ನೇಹಿತನ ಬರ್ತ್​ ಡೇ ಪಾರ್ಟಿ ಮಾಡಲೆಂದು ಹೊರಟಿದ್ದಾಗ ಈ ಅವಘಡ ಸಂಭವಿಸಿದೆ.

ಡಿಕ್ಕಿ ರಭಸಕ್ಕೆ ಬೈಕ್​ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೇವರ್ಗಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಮೊಬೈಲ್ ತಂದ ಗಲಾಟೆ.. ಮಗನ ಕೊಲೆಯಲ್ಲಿ ಅಂತ್ಯ

ಮೊಬೈಲ್ ವಿಚಾರದಲ್ಲಿ ತಂದೆ ಮಗನ ನಡುವೆ ಶುರುವಾದ ಗಲಾಟೆ ಪುತ್ರನ ಕೊಲೆಯಲ್ಲಿ ಅಂತ್ಯವಾದ ಇಂತಹದ್ದೇ ಮತ್ತೊಂದು ಘಟನೆ ಮೈಸೂರು ನಗರದ ಬನ್ನಿಮಂಟಪದಲ್ಲಿ ಇತ್ತೀಚೆಗೆ ನಡೆದಿತ್ತು. ಉಮೇಜ್ (23) ತಂದೆಯಿಂದಲೇ ಕೊಲೆಯಾದ ವ್ಯಕ್ತಿ.

ಈತನ ತಂದೆ ಅಸ್ಲಂ ಪಾಷಾ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ತಾಯಿಯ ಫೋನ್​​ ಅನ್ನು ಅನುಮತಿ ಪಡೆಯದೇ ಉಮೇಜ್ ಬಳಸಿದ್ದಾನೆ. ಈ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಸಿಟ್ಟಿನಲ್ಲಿ ತಂದೆ ಅಸ್ಲಂ ಪಾಷಾ ಮಗ ಉಮೇಜ್​ನನ್ನು ಕೊಲೆ ಮಾಡಿದ್ದ. ಕ್ಷುಲ್ಲಕ ಕಾರಣಕ್ಕೆ ಮಗನನ್ನು ಕೊಂದ ತಂದೆ ಅಸ್ಲಂ ಪಾಷಾನನ್ನು ಎನ್ ಆರ್ ಠಾಣೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಎನ್​ ಆರ್​ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.