ETV Bharat / state

ಗ್ರಾಮ ಸಮರಕ್ಕೆ ಕಲಬುರಗಿ ಜಿಲ್ಲಾಡಳಿತದಿಂದ ಸಕಲ ತಯಾರಿ - ಕಲಬುರಗಿ ಗ್ರಾಮ ಪಂಚಾಯತ್ ಚುನಾವಣೆ

ಗ್ರಾಮ ಪಂಚಾಯತ್​​​ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ರಾಜ್ಯದ 30 ಜಿಲ್ಲೆಗಳಲ್ಲಿ ಎರಡು ಹಂತಗಳಲ್ಲಿ ಅಂದರೆ ಒಟ್ಟು 5,762 ಗ್ರಾಮ ಪಂಚಾಯತ್​ಗಳಿಗೆ ಡಿಸೆಂಬರ್ 22 ಮತ್ತು 27 ರಂದು ಮತದಾನ ನಡೆಯಲಿದೆ. ಕಲಬುರಗಿ ಜಿಲ್ಲೆಯ 261 ಗ್ರಾಮ ಪಂಚಾಯತ್​​ಗಳ ಪೈಕಿ 242 ಗ್ರಾಮ ಪಂಚಾಯತ್​​ಗಳಿಗೆ ಚುನಾವಣೆ ನಡೆಯಲಿದ್ದು, ಸಂಬಂಧಪಟ್ಟ ಅಧಿಕಾರಿ ವರ್ಗಕ್ಕೆ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದಾರೆ.

Gram Panchayat elections to be held in a proper manner; vv jyosthna
ಗ್ರಾಮ ಪಂಚಾಯತ್ ಚುನಾವಣೆ ಸೂಕ್ತ ರೀತಿಯಲ್ಲಿ ನಡೆಯಲು ಕಲಬುರಗಿ ಡಿಸಿ ಕ್ರಮ
author img

By

Published : Dec 1, 2020, 11:00 AM IST

ಕಲಬುರಗಿ: ಜಿಲ್ಲೆಯ 261 ಗ್ರಾಮ ಪಂಚಾಯತ್​​ಗಳ ಪೈಕಿ 242 ಗ್ರಾಮ ಪಂಚಾಯತ್​​ಗಳಿಗೆ ಚುನಾವಣೆ ನಡೆಯಲಿರುವ ಕಾರಣ, ಗ್ರಾ.ಪಂಚಾಯತ್​​​ ವ್ಯಾಪ್ತಿಯಲ್ಲಿ ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ತಿಳಿಸಿದ್ದಾರೆ.

ಗ್ರಾಮ ಪಂಚಾಯತ್​ ಚುನಾವಣೆ ಮತಪೆಟ್ಟಿಗೆ ಮೂಲಕ ನಡೆಯಲಿದ್ದು, ಕೋವಿಡ್-19 ಕಾರಣ ಎರಡು ಹಂತದಲ್ಲಿ ಮತದಾನ ಪ್ರಕಿಯೆ ನಡೆಸಲಾಗುವುದು. ಚುನಾವಣಾ ನೀತಿ ಸಂಹಿತೆ ಡಿಸೆಂಬರ್ 31ರ ಸಂಜೆ 5 ಗಂಟೆಯವರೆಗೆ ಇರಲಿದೆ. ಈ ಚುನಾವಣೆ ನೀತಿ ಸಂಹಿತೆಯು ಪಟ್ಟಣ ಪಂಚಾಯತ್​, ಪುರಸಭೆ, ನಗರಸಭೆ, ನಗರ ಪಾಲಿಕೆ ಹಾಗೂ ಮಹಾನಗರ ಪಾಲಿಕೆ ಪ್ರದೇಶಕ್ಕೆ ಅನ್ವಯಿಸುವುದಿಲ್ಲ ಎಂದು ಡಿಸಿ ವಿವರಿಸಿದರು.

ಮೊದಲನೇ ಹಂತ: 126 ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ

ಕಲಬುರಗಿ ತಾಲೂಕಿನ 28, ಆಳಂದ-36, ಅಫಜಲಪೂರ-28, ಕಮಲಾಪೂರ-16, ಕಾಲಗಿ- 14 ಹಾಗೂ ಶಹಾಬಾದ ತಾಲೂಕಿನ 4 ಗ್ರಾಮ ಪಂಚಾಯತ್​​ ಸೇರಿದಂತೆ ಒಟ್ಟು 126 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ.

ಎರಡನೇ ಹಂತ: 116 ಗ್ರಾಮ ಪಂಚಾಯತ್​ಗಳಿಗೆ ಚುನಾವಣೆ

ಯಡ್ರಾಮಿ-15, ಜೇವರ್ಗಿ- 23, ಚಿತ್ತಾಪೂರ- 24, ಚಿಂಚೋಳಿ- 27 ಹಾಗೂ ಸೇಡಂ ತಾಲೂಕಿನ 27 ಗ್ರಾಮ ಪಂಚಾಯತ್​​ ಸೇರಿದಂತೆ ಒಟ್ಟು 116 ಗ್ರಾಮ ಪಂಚಾಯತ್​​ಗಳಿಗೆ ಚುನಾವಣೆ.

19 ಗ್ರಾಮ ಪಂಚಾಯತ್​​ಗಳಲ್ಲಿ ಚುನಾವಣೆ ಇಲ್ಲ

ನ್ಯಾಯಾಲಯದಲ್ಲಿನ ಪ್ರಕರಣ ಬಾಕಿ ಇದ್ದರೆ, ಅವಧಿ ಮುಕ್ತಾಯವಾಗದ ಹಾಗೂ ಇನ್ನಿತರೆ ಕಾರಣದಿಂದ ಜಿಲ್ಲೆಯ 19 ಗ್ರಾಮ ಪಂಚಾಯತ್​ಗಳಲ್ಲಿ ಚುನಾವಣೆ ನಡೆಸಲಾಗುತ್ತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದರು.

ಈ ಸುದ್ದಿಯನ್ನೂ ಓದಿ: ರಾಜ್ಯದಲ್ಲಿ 2 ಹಂತಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ: ಆಯೋಗದ ಘೋಷಣೆ

ಚುನಾವಣಾ ಪ್ರಕ್ರಿಯೆ:

ಮೊದಲನೇ ಹಂತದ ಚುನಾವಣೆಗೆ ಡಿ.7 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಡಿ.11 ಕೊನೆಯ ದಿನವಾಗಿದ್ದು, ಡಿ.12 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿ.14 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೇಯ ದಿನವಾಗಿರುತ್ತದೆ. ಡಿ.22 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ಮತ್ತು ಮರು ಮತದಾನದ ಅವಶ್ಯವಿದ್ದರೆ ಡಿ.24 ರಂದು ನಡೆಯಲಿದೆ.

ಅದೇ ರೀತಿ ಎರಡನೇ ಹಂತದ ಚುನಾವಣೆಗೆ ಡಿ.11 ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ನಾಮಪತ್ರಗಳನ್ನು ಸಲ್ಲಿಸಲು ಡಿ.16 ಕೊನೆಯ ದಿನವಾಗಿದ್ದು, ಡಿ.17 ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಡಿ.19 ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಡಿ.27 ರಂದು ಬೆಳಿಗ್ಗೆ 7 ರಿಂದ ಸಾಯಂಕಾಲ 5 ಗಂಟೆಯವರೆಗೆ ಮತ್ತು ಮರು ಮತದಾನದ ಅವಶ್ಯವಿದ್ದರೆ ಡಿ.29 ರಂದು ನಡೆಯಲಿದೆ. ಎರಡು ಹಂತದಲ್ಲಿ ನಡೆಯುವ ಚುನಾವಣೆಯ ಮತ ಎಣಿಕೆ ಕಾರ್ಯ ಡಿ.30 ರಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕು ಕೇಂದ್ರದಲ್ಲಿ ನಡೆಸಿ ಡಿ.31ಕ್ಕೆ ಚುನಾವಣೆ ಪ್ರಕ್ರಿಯೆ ಮುಗಿಯಲಿದೆ.

ಮತದಾರರ ವಿವರ:

ಜಿಲ್ಲೆಯ 242 ಗ್ರಾಮ ಪಂಚಾಯತ್​​ಗಳ 1,427 ವಾರ್ಡ್​​​ಗಳಿಗೆ ನಡೆಯುವ ಚುನಾವಣೆಗೆ ದಿನಾಂಕ 31-08-2020ರ ಅರ್ಹ ಮತದಾರರ ಪಟ್ಟಿಯಂತೆ 6,76,421 ಪುರುಷರು, 6,49,872 ಮಹಿಳೆಯರು ಹಾಗೂ 107 ಇತರೆ ಮತದಾರರು ಒಳಗೊಂಡಂತೆ ಒಟ್ಟು 13,26,400 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ.

ಅಧಿಕಾರಿಗಳ ನೇಮಕ:

ಚುನಾವಣೆಗೆ 243 ರಿಟರ್ನಿಂಗ್ ಅಧಿಕಾರಿಗಳು, 243 ಸಹಾಯಕ ರಿಟರ್ನಿಂಗ್ ಅಧಿಕಾರಿಗಳು ಹಾಗೂ 52 ಹೆಚ್ಚುವರಿ ಅಧಿಕಾರಿಗಳು ಸೇರಿದಂತೆ ಒಟ್ಟು 269 ಅಧಿಕಾರಿಗಳನ್ನು ನೇಮಿಸಲಾಗಿದೆ. ಇದಲ್ಲದೆ ಪ್ರತಿ ತಾಲೂಕಿನ 1-2 ಗ್ರಾಮ ಪಂಚಾಯತ್​ಗಳಿಗೆ ಓರ್ವ ತಾಲೂಕು ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯನ್ನಾಗಿಸಿ ನೇಮಿಸಿ ಚುನಾವಣೆ ನೀತಿ ಸಂಹಿತೆ ಮೇಲೆ ನಿಗಾ ವಹಿಸಲು ಸೂಚಿಸಲಾಗುವುದು ಹಾಗೂ ಪ್ರತಿ ತಾಲೂಕಿಗೆ ಒಬ್ಬರಂತೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಹ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುತ್ತದೆ.

ಮತಗಟ್ಟೆಗಳ ಮಾಹಿತಿ:

242 ಗ್ರಾಮ ಪಂಚಾಯತ್​ ಚುನಾವಣೆಗೆ ಒಟ್ಟಾರೆ 1,499 ಮೂಲ ಮತಗಟ್ಟೆ, 342 ಆಕ್ಸಲರಿ ಮತಗಟ್ಟೆ ಸೇರಿದಂತೆ ಒಟ್ಟು 1,841 ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಎಲ್ಲಾ ತಹಶೀಲ್ದಾರ ಕಚೇರಿಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ.

ಗ್ರಾಮ ಪಂಚಾಯತ್ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಎಲ್ಲಾ ರಾಜಕೀಯ ಪಕ್ಷಗಳು, ಸಾರ್ವಜನಿಕರು ಚುನಾವಣಾ ಆಯೋಗಕ್ಕೆ ಅಗತ್ಯ ಸಹಕಾರ ನೀಡಬೇಕು. ದೋಷರಹಿತ ಚುನಾವಣೆ ನಡೆಸಲು ಎಲ್ಲಾ ಅಧಿಕಾರಿಗಳ ವರ್ಗ ತಮಗೆ ನೀಡಲಾದ ಜವಾಬ್ದಾರಿಯನ್ನು ಚಾಚು ತಪ್ಪದೆ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಇದೇ ವೇಳೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.