ಕಲಬುರಗಿ : ಕೇಂದ್ರ ಸರ್ಕಾರದ ಬಜೆಟ್ ಖಾಸಗೀಕರಣ ಪ್ರಕ್ರಿಯೆಯನ್ನು ಜಾರಿಗೊಳಿಸಲು ಪೂರಕವಾಗಿದೆ ಎಂದು ಸಿಪಿಐ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಜಾರಿಗೊಳಿಸಲಾದ ಬಜೆಟ್ ಆಘಾತಕಾರಿಯಾಗಿದೆ. ಅನುದಾನ ಕ್ರೂಢೀಕರಣಕ್ಕೆ ದೇಶದ ಜನರ, ಸಾರ್ವಜನಿಕ ವಲಯದ ಆಸ್ತಿ ಹಾಗೂ ಉದ್ಯಮಿಗಳನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.
ದೇಶದ ಸಂಪತ್ತನ್ನು ಕಾರ್ಪೊರೇಟ್ ಕಂಪನಿಗಳಿಗೆ ಕೊಡಲು ಮುಂದಾಗಿದೆ. ಅಲ್ಲದೆ ನೋವಿನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರು, ಕಾರ್ಮಿಕರಿಗೆ ಬಜೆಟ್ನಿಂದ ಯಾವುದೇ ಉಪಯೋಗವಾಗಿಲ್ಲ.
ಕೋವಿಡ್ನಿಂದಾಗಿ ಮಗುಚಿಹೋದ ಸಣ್ಣ ಕೈಗಾರಿಕೆಗಳ ಪುನಶ್ಚೇತನಕ್ಕೆ ಯಾವುದೇ ಕಾರ್ಯಕ್ರಮ ಜಾರಿಗೊಳಿಸಲ್ಲ ಎಂದು ಸಾತಿ ಸುಂದರೇಶ್ ಕೇಂದ್ರದ ವಿರುದ್ಧ ಹರಿಹಾಯ್ದರು.
ಸಚಿವ ಈಶ್ವರಪ್ಪ ಹೇಳಿಕೆಗೆ ವಿರೋಧ : ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈಶ್ವರಪ್ಪನವರು ಗೋ ರಕ್ಷಣೆಯ ಹೆಸರಿನಲ್ಲಿ ದಬ್ಬಾಳಿಕೆ ನಡೆಸುವುದಲ್ಲದೆ, ಸಂವಿಧಾನ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಓದಿ: ಕಲ್ಯಾಣ ಕರ್ನಾಟಕಕ್ಕೆ ಮತ್ತೆ ಅನ್ಯಾಯ:ಬಜೆಟ್ ಬಗ್ಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ
ತೊಗರಿ ಖರೀದಿ ಕೇಂದ್ರ ಸ್ಥಾಪನೆಗೆ ಆಗ್ರಹ : ಕಲ್ಯಾಣ ಕರ್ನಾಟಕ ಭಾಗದ ವಾಣಿಜ್ಯ ಬೆಳೆ ಎಂದೇ ಗುರುತಿಸಲಾದ ತೊಗರಿ ಬೆಳೆಗಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಾಪಿಸಲಾದ ತೊಗರಿ ಮಂಡಳಿ ನಿಷ್ಕ್ರಿಯಗೊಳಿಸುವ ಹುನ್ನಾರ ನಡೆದಿದೆ.
ಕೂಡಲೇ ಇದನ್ನು ಕೈಬಿಟ್ಟು ತೊಗರಿ ಮಂಡಳಿಗೆ ಸಂಪೂರ್ಣ ಸ್ವಾಯತ್ತ ಕೊಟ್ಟು ತೊಗರಿ ಬಂಗಾಳಿಗೆ ಅವಶ್ಯಕ ಹಣವನ್ನು ಬಿಡುಗಡೆಗೊಳಿಸಿ, ರೈತರ ಬೆಳೆದ ತೊಗರಿಯನ್ನು ಖರೀದಿಸಬೇಕು ಹಾಗೂ ಪ್ರತಿ ಕ್ವಿಂಟಲ್ಗೆ ಕನಿಷ್ಠ 8 ಎಂಟು ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ಸುಂದರೇಶ್ ಆಗ್ರಹಿಸಿದ್ದಾರೆ.