ETV Bharat / state

ಬೆಳೆಗಳ ಬೆಂಬಲ ಬೆಲೆ ಖರೀದಿಗೆ ಕಾನೂನು ರೂಪಿಸಿ; ಪ್ರಕಾಶ್ ಕಮ್ಮರಡಿ

author img

By

Published : Jan 25, 2021, 7:20 PM IST

ಸರ್ಕಾರ ಬೆಂಬಲ ಬೆಲೆ ಘೋಷಿಸುವುದರೊಂದಿಗೆ ಅದಕ್ಕೆ ಕಾನೂನು ಸ್ವರೂಪ ನೀಡಬೇಕು ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್. ಪ್ರಕಾಶ್ ಕಮ್ಮರಡಿ ಒತ್ತಾಯಿಸಿದ್ದಾರೆ.

Prakash Kammaradi
ಪ್ರಕಾಶ್ ಕಮ್ಮರಡಿ

ಕಲಬುರಗಿ: ಸರ್ಕಾರ ಕೇವಲ ಬೆಂಬಲ ಬೆಲೆ ಘೋಷಿಸಿದರೆ ಸಾಲದು, ಬೆಂಬಲ ಬೆಲೆಗೆ ಕಾನೂನು ಸ್ವರೂಪ ನೀಡಬೇಕು. ಬೆಲೆ ಇಳಿಕೆಯಾದಾಗ ಕಡ್ಡಾಯವಾಗಿ ಸರ್ಕಾರವೇ ಕೃಷಿ ಉತ್ಪನ್ನಗಳನ್ನು ಖರೀದಿಸಬೇಕೆಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಟಿ.ಎನ್. ಪ್ರಕಾಶ್ ಕಮ್ಮರಡಿ ಆಗ್ರಹಿಸಿದ್ದಾರೆ.

ರೈತರಿಗೆ ಸರ್ಕಾರವೇ ಬೆಂಬಲ ನೀಡಬೇಕೆಂದ ಪ್ರಕಾಶ್​ ಕಮ್ಮರಡಿ

ಕಲಬುರಗಿಯಲ್ಲಿ ಮಾತನಾಡಿದ ಅವರು, ಸಿದ್ಧರಾಮಯ್ಯ ಸರ್ಕಾರವಿದ್ದಾಗ ಪ್ರತಿ ಕ್ವಿಂಟಲ್ ತೊಗರಿ 6 ಸಾವಿರ ರೂಪಾಯಿಗೆ ಖರೀದಿ ಮಾಡಲಾಗಿತ್ತು. 35 ಲಕ್ಷ ಕ್ವಿಂಟಲ್​ಗೂ ಅಧಿಕ ತೊಗರಿ ಖರೀದಿ ಮಾಡಲಾಗಿತ್ತು. ಆದ್ರೆ ಮೂರು ವರ್ಷಗಳ ನಂತರವೂ ತೊಗರಿಗೆ ಅದೇ 6 ಸಾವಿರ ರೂಪಾಯಿ ದರ ನಿಗದಿ ಮಾಡಲಾಗಿದೆ. ಅಷ್ಟೇ ದರಕ್ಕೆ ಈ ವರ್ಷ ತೊಗರಿ ಖರೀದಿ ನಡೀತಿಲ್ಲ. ಈ ರೀತಿಯಾದ್ರೆ ರೈತರ ಉದ್ಧಾರ ಅಸಾಧ್ಯ ಎಂದರು.

ಬೆಂಬಲ ಬೆಲೆಗೆ ಕಾಯ್ದೆ ಸ್ವರೂಪ ನೀಡಬೇಕು. ಬೆಂಬಲ ಬೆಲೆ ಶಾಸನ ಬದ್ಧವಾಗಬೇಕು. ರಾಜ್ಯದ 23 ಪ್ರಮುಖ ಬೆಳೆಗಳ ದರ ಕುಸಿತವಾದಾಗ ಸರ್ಕಾರವೇ ಖರೀದಿಸಬೇಕು. ಬೆಂಬಲ ಬೆಲೆಯೊಂದಿಗೆ ಸರ್ಕಾರ ಖರೀದಿಸೋ ಕಾನೂನು ಜಾರಿಗೆ ತರಬೇಕೆಂದು ಕಮ್ಮರಡಿ ಒತ್ತಾಯಿಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.