ETV Bharat / state

ಅಕ್ಟೋಬರ್ 3 ರಿಂದ ಮಂಗಳೂರು ದಸರಾ ವೈಭವ: ಮೆರವಣಿಗೆಯಲ್ಲಿ ಡಿಜೆಗೆ ಬ್ರೇಕ್! - Mangaluru Dasara

ಈ ಬಾರಿ ಮಂಗಳೂರು ದಸರಾ ಅದ್ಧೂರಿಯಾಗಿ ನಡೆಯಲಿದೆ. ಆದರೆ, ದಸರಾ ಮೆರವಣಿಗೆಯಲ್ಲಿ ಅಬ್ಬರದ ಸೌಂಡ್​ ಹಾಗೂ ಡಿಜೆಗೆ ಅವಕಾಶ ಇಲ್ಲ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ತಿಳಿಸಿದ್ದಾರೆ.

Kudroli Temple
ಕುದ್ರೋಳಿ ದೇವಸ್ಥಾನ (ETV Bharat)
author img

By ETV Bharat Karnataka Team

Published : Oct 1, 2024, 11:56 AM IST

Updated : Oct 1, 2024, 12:47 PM IST

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 3 ರಿಂದ 14ವರೆಗೆ ನಡೆಯಲಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಅಬ್ಬರದ ಸೌಂಡ್​ಗೆ, ಡಿಜೆಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ.

ಈ ಬಾರಿಯ ಮಂಗಳೂರು ದಸರಾ ಉದ್ಘಾಟನೆಯನ್ನು ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೆರವೇರಿಸಲಿದ್ದಾರೆ. ದಸರಾ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ಸೇವೆಗಳು ನಡೆಯಲಿದೆ. ಅ.3 ರಂದು ಬೆಳಗ್ಗೆ ನವದುರ್ಗೆಯರು ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ಅಂದಿನಿಂದ ಅ.14 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ನಡೆಯಲಿದೆ.

ಪದ್ಮರಾಜ್​ ಆರ್​. (ETV Bharat)

ಅ.6 ರಂದು ಹಾಫ್ ಮ್ಯಾರಾಥಾನ್: ಈ ಬಾರಿ ವಿಶೇಷವಾಗಿ ಅ.6 ರಂದು ಬೆಳಗ್ಗೆ 5.30ಕ್ಕೆ ಹಾಫ್ ಮ್ಯಾರಾಥಾನ್ ನಡೆಯಲಿದೆ. ಇದರಲ್ಲಿ ದೇಶದ ವಿವಿಧ ಭಾಗಗಳಿಂದ 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ.

ದೀಪಾಲಂಕಾರ: ಮಂಗಳೂರು ದಸರಾದ ಪ್ರಯುಕ್ತ ನಗರದಲ್ಲಿ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಕುದ್ರೋಳಿ ದೇವಸ್ಥಾನ ಮತ್ತು ದಸರಾ ಮೆರವಣಿಗೆ ಹಾದು ಹೋಗುವ ರಸ್ತೆ ಮತ್ತು ಇತರೆಡೆಗಳಲ್ಲಿ ದೀಪಾಲಂಕಾರ ಮಾಡಲಾಗಿದೆ.

ಅ.13 ರಂದು ಭವ್ಯ ಶೋಭಾಯಾತ್ರೆ: ಅ.13 ರಂದು ಸಂಜೆ 4ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಕೇರಳದ ಮೈ ನವಿರೇಳಿಸುವ ಚೆಂಡೆ ವಾದ್ಯ, ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಜಾನಪದ, ಸಾಂಸ್ಕೃತಿಕ ಹಿನ್ನೆಲೆಯ ನೃತ್ಯ ತಂಡಗಳು, ಸ್ತಬ್ದ ಚಿತ್ರಗಳು ಭಾಗವಹಿಸಲಿದೆ.

ಡಿಜೆಗೆ ಅವಕಾಶ ಇಲ್ಲ: ಈ ಬಗ್ಗೆ ಮಾತನಾಡಿದ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., "ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ನೀಡುವುದಿಲ್ಲ. ಪೊಲೀಸ್ ಇಲಾಖೆಯಿಂದಲೂ ಇದಕ್ಕೆ ಸೂಚನೆ ಇದೆ. ಶಬ್ದ ಮಾಲಿನ್ಯ ಆಗಬಾರದು. ಇದರಿಂದ ಯಾರಿಗೂ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಡಿಜೆಗೆ ಈ ಬಾರಿ ಅವಕಾಶ ಇಲ್ಲ. ಕರ್ನಾಟಕ ಹೈಕೋರ್ಟ್ ಮಡಿಕೇರಿ ದಸರಾಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನಂತೆ ಸೌಂಡ್ ಸಿಸ್ಟಮ್​ನಲ್ಲೂ ಕಡಿಮೆ ಶಬ್ದ ಬಳಸಲು ತೀರ್ಮಾನಿಸಲಾಗಿದೆ. ಅದರಂತೆ 6 ಸ್ಪೀಕರ್ ಮತ್ತು‌ 6 ವೂಪರ್​ಗಳನ್ನು ಮಾತ್ರ ಬಳಸಲು ಸೂಚಿಸಲಾಗಿದೆ" ಎಂದರು.

ಇದನ್ನೂ ಓದಿ: ಅಕ್ಟೋಬರ್‌ 3ರ ಬೆಳಗ್ಗೆ ವೃಶ್ಚಿಕ ಲಗ್ನದಲ್ಲಿ ನಾಡಹಬ್ಬ ದಸರಾ ಉದ್ಘಾಟನೆ - Mysuru Dasara 2024

Last Updated : Oct 1, 2024, 12:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.