ETV Bharat / state

ಕಲಬುರಗಿಯಲ್ಲಿ ಲಾಕ್​ಡೌನ್​ಗೆ ಉತ್ತಮ ಸ್ಪಂದನೆ... ರಸ್ತೆಗಿಳಿಯದ ಜನ

author img

By

Published : Jul 15, 2020, 5:11 PM IST

ನಿನ್ನೆಯಿಂದ ಕಲಬುರಗಿಯಲ್ಲಿ ಲಾಕ್​ಡೌನ್​ ಜಾರಿಯಾಗಿದೆ. ಆದರೆ ನಿನ್ನೆ ಲಾಕ್​ಡೌನ್​ ಇದ್ದರೂ ಜನರ ಓಡಾಟ ಹೆಚ್ಚಾಗಿಯೇ ಕಂಡುಬಂದಿತ್ತು, ಅಲ್ಲದೆ ಜನರಲ್ಲಿ ಗೊಂದಲ ಸಹ ಮೂಡಿತ್ತು. ಆದರೆ ಇಂದು ರಸ್ತೆಯಲ್ಲಿ ಜನರ ಓಡಾಟ ವಿರಳವಾಗಿದ್ದು, ಲಾಕ್​ಡೌನ್​​​ಗೆ ಸಹಕರಿಸಿದ್ದಾರೆ.

Good response to the lockdown at Kalburgi... People hesitate to came out
ಕಲಬುರಗಿಯಲ್ಲಿ ಲಾಕ್​ಡೌನ್​ಗೆ ಉತ್ತಮ ಸ್ಪಂದನೆ...ರಸ್ತೆಗಿಳಿಯಲು ಜನರ ಹಿಂದೇಟು

ಕಲಬುರಗಿ: ಕೊರೊನಾ ಹರಡುವಿಕೆಯ ಹಿನ್ನೆಲೆ ಕಲಬುರಗಿಯಲ್ಲಿ ಲಾಕ್​ಡೌನ್ ಮುಂದುವರಿದಿದೆ. ಕಲಬುರಗಿ ನಗರ ಮತ್ತು ಜಿಲ್ಲೆಯ ಇತರೆಡೆ ನಿನ್ನೆ ಬೆಳಗ್ಗೆಯಿಂದಲೇ ಲಾಕ್​​ಡೌನ್ ಆರಂಭಗೊಂಡಿದೆ.

ಆದರೆ ನಿನ್ನೆ ಆರಂಭಗೊಂಡಿದ್ದ ಲಾಕ್​​ಡೌನ್​ಗೆ ಉತ್ತಮ ಪ್ರತಿಕ್ರಿಯೆ ದೊರಕದೆ, ಕಾಟಾಚಾರಕ್ಕೆ ಲಾಕ್​ಡೌನ್ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಇಂದು ಜನತೆ ರಸ್ತೆಗಳಿಯದೆ ಲಾಕ್​​ಡೌನ್​ ಯಶಸ್ವಿಯತ್ತ ಸಾಗಿದೆ.

ರಾತ್ರಿಯಿಂದ ಸತತವಾಗಿ ಜಿಟಿ ಜಿಟಿ ಮಳೆ ಇರೋದ್ರಿಂದ ವಾಹನ ಸಂಚಾರ ವಿರಳವಾಗಿದೆ. ಜಿಲ್ಲಾಡಳಿತ ದಿಢೀರಾಗಿ ಲಾಕ್​ಡೌನ್ ಘೋಷಿಸಿದ್ದರಿಂದ ನಿನ್ನೆ ಜನತೆಯಲ್ಲಿ ಗೊಂದಲ ಉಂಟಾಗಿತ್ತು. ಇಂದಿನಿಂದ ಕಟ್ಟುನಿಟ್ಟಾಗಿ ಲಾಕ್​​​ಡೌನ್ ಜಾರಿಗೆ ಜಿಲ್ಲಾಡಳಿತ ಮುಂದಾಗಿದೆ.

ಗ್ರಾಮೀಣ ಪ್ರದೇಶ ಹೊರತುಪಡಿಸಿ ಜುಲೈ 20ರ ವರೆಗೂ ನಗರ ಮತ್ತು ಜಿಲ್ಲೆಯ ಇತರ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಲಾಕ್​ಡೌನ್ ಮುಂದುವರಿಯಲಿದ್ದು, ತುರ್ತು ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.