ಕಲಬುರಗಿ : ಹಣ, ಚಿನ್ನಾಭರಣ ಕಸಿದುಕೊಂಡು ಬಳಿಕ ಅಕ್ಕಸಾಲಿಗನಿಗೆ ಆ್ಯಸಿಡ್ ಕುಡಿಸಿ, ರಾಡ್‌ನಿಂದ ಹೊಡೆದು ಬರ್ಬರ ಹತ್ಯೆಗೈದ ಭಯಾನಕ ಘಟನೆ ಚಿತ್ತಾಪುರ ತಾಲೂಕಿನ ರಾವೂರ್ ಕ್ರಾಸ್ ಬಳಿ ನಡೆದಿದೆ.
![Gold merchant murder by some people at Kalaburagi](https://etvbharatimages.akamaized.net/etvbharat/prod-images/14567084_bin.jpg)
ಕಲಬುರಗಿಯ ಶಹಾಬಜಾರ ಕಬಾಡ್ಗಲ್ಲಿ ನಿವಾಸಿ ವಿಜಯಕುಮಾರ್ ಶೀಲವಂತ (38) ಕೊಲೆಯಾದ ಅಕ್ಕಸಾಲಿಗ. ಆರು ಲಕ್ಷ ರೂ. ನಗದು ಹಣದೊಂದಿಗೆ ಚಿನ್ನಾಭರಣ ತರಲು ಹಲಕರ್ಟಿ ಗ್ರಾಮಕ್ಕೆ ಹೋಗುತ್ತಿದ್ದಾಗ, ಅಡ್ಡಗಟ್ಟಿದ ದುಷ್ಕರ್ಮಿಗಳು ಹಣ ಹಾಗೂ ಆತನ ಬಳಿಯಿದ್ದ ಚಿಕ್ಕಪುಟ್ಟ ಚಿನ್ನಾಭರಣ ದೋಚಿದ್ದಾರೆ.
ಇದನ್ನೂ ಓದಿ: ಕೆಯುಡಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಅರೆಸ್ಟ್
ಇಷ್ಟಕ್ಕೆ ಬಿಡದ ದುಷ್ಕರ್ಮಿಗಳು, ವಿಜಯಕುಮಾರ್ಗೆ ಆ್ಯಸಿಡ್ ಕುಡಿಸಿ ರಾಡ್‌ನಿಂದ ಹೊಡೆದು ಹತ್ತೆಗೈಯ್ದು ಪರಾರಿಯಾಗಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.