ಕಲಬುರಗಿ: ನವರಾತ್ರಿ ಅಂಗವಾಗಿ ಹಾಕಲಾದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋಗಿದ್ದ ಯುವಕರಿಬ್ಬರು ಮುಳುಗಿ ನೀರುಪಾಲಾಗಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರ ಕೆರೆಯಲ್ಲಿ ನಡೆದಿದೆ.
ನವರಾತ್ರಿ ವಿಜಯದಶಮಿ ಹಿನ್ನೆಲೆಯಲ್ಲಿ ಹಾಕಲಾಗಿದ್ದ ಘಟ್ಟದ ಸಸಿಯನ್ನು ನೀರಿಗೆ ಬಿಡಲು ಹೋದಾಗ ಈ ದುರ್ಘಟನೆ ನಡೆದಿದೆ. ಕಲಬುರಗಿ ತಾಲೂಕಿನ ಕೊಳ್ಳೂರ ಗ್ರಾಮದವರಾದ ಗಣೇಶ ಗುತ್ತೇದಾರ (19) ಹಾಗೂ ಗೋಪಾಲ ಪಾಟೀಲ್ (18) ನೀರು ಪಾಲಾದವರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಪತ್ತೆ ಕಾರ್ಯಾಚರಣೆ ಮುಂದುವರೆಸಿದ್ದಾರೆ. ಫರತಾಬಾದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.