ಕಲಬುರಗಿ: ಹಾವು ಕಡಿತಕ್ಕೆ ಒಳಗಾದ ಬಾಲಕಿಗೆ
ಮೃತಪಟ್ಟಿದ್ದು, ವೈದ್ಯರ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪ ಕೇಳಿಬಂದಿದೆ.
ವಾಡಿ ಪಟ್ಟಣದ ಬಸವನಕಣಿ ಬಡಾವಣೆಯ ನಿವಾಸಿಯಾಗಿದ್ದ ಭಾರತಿ (8) ಮೃತ ದುರ್ದೈವಿ. ಬಹಿರ್ದೆಸೆಗೆ ಹೋದಾಗ ಹಾವು ಕಡಿದು ಬಾಲಕಿ ಅಸ್ವಸ್ಥಗೊಂಡಿದ್ದಳು, ತಕ್ಷಣ ವಾಡಿ ಸಮುದಾಯ ಆಸ್ಪತ್ರೆಗೆ ಕರೆದೊಯಲಾಗಿತ್ತು, ಆದರೆ ಸಕಾಲಕ್ಕೆ ವೈದ್ಯರು ಮತ್ತು ಔಷಧ ಸಿಗದ ಹಿನ್ನಲೆ ತಮ್ಮ ಮಗಳು ಸಾವನ್ನಪ್ಪಿದ್ದಾಳೆಂದು ಪೊಷಕರು ಆರೋಪಿಸಿದ್ದಾರೆ.
ವೈದ್ಯರ ಬೇಜವಬ್ದಾರಿ ಖಂಡಿಸಿ ಆಸ್ಪತ್ರೆ ಎದುರು ಬಾಲಕಿ ಶವವಿಟ್ಟು ಪ್ರತಿಭಟನೆ ಮಾಡಿ, ಕೆಲಹೊತ್ತು ಆಸ್ಪತ್ರೆ ಮುಂಭಾಗದ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಆಸ್ಪತ್ರೆ ವೈದ್ಯರ ವಿರುದ್ದ ಸೂಕ್ತ ಕ್ರಮಕ್ಕೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.