ETV Bharat / state

ಸಿಲಿಂಡರ್​ ಸ್ಪೋಟ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಕುಟುಂಬಸ್ಥರು - ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆ

ಅಡುಗೆ ಮಾಡುವಾಗ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಬಾಗಿಲು ಕಿಟಕಿಗಳು ಚಿದ್ರಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

Gas cylinder explosion
ಗ್ಯಾಸ್​ ಸಿಲಿಂಡರ್​ ಸ್ಪೋಟ
author img

By

Published : Sep 11, 2020, 3:47 PM IST

ಕಲಬುರಗಿ: ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಬಾಗಿಲು ಕಿಟಕಿಗಳು ಚಿದ್ರಗೊಂಡಿದ್ದು, ಕೂದಲೆಳೆ ಅಂತರದಲ್ಲಿ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ಯಾಸ್​ ಸಿಲಿಂಡರ್​ ಸ್ಪೋಟ

ನಗರದ ಮಾಣಿಕೇಶ್ವರಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ ಅಡುಗೆ ಮಾಡುವಾಗ ಗ್ಯಾಸ್ ಸಿಲಿಂಡರ್​​ ಸೋರಿಕೆಯಾಗಿ ದಿಢೀರ್​​ ಸ್ಫೋಟವಾಗಿದೆ. ಘಟನೆಯಲ್ಲಿ ಸುರೇಶ (57) ಎಂಬುವರ ಕಾಲು ಮೂಳೆ ಮುರಿದಿದೆ‌.

ಭರತ್, ರಮೇಶ್, ಅಂಬಿಕಾ, ಶಶಿಕಲಾ ಇವರಿಗೆ ಸುಟ್ಟ ಗಾಯಾಗಳಾಗಿದ್ದು, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.