ETV Bharat / state

ಕಲಬುರಗಿಯಲ್ಲಿ ಕತ್ತಲಾಗ್ತಿದ್ದಂತೆ ರೌಡಿಗಳ ಕಿರಿಕಿರಿ​; ಕಡಿವಾಣ ಹಾಕಬೇಕಿದೆ ಪೊಲೀಸ್​ ಇಲಾಖೆ

ಕಳೆದ ಕೆಲ ದಿನಗಳಿಂದ ಶಾಂತವಾಗಿದ್ದ ಕಲಬುರಗಿ ನಗರದಲ್ಲಿ ಈಗ ಮತ್ತೆ ಪುಡಿ ರೌಡಿಗಳ ಕಿರಿಕ್ ಮಿತಿ ಮಿರುತ್ತಿದೆ. ಹಾಡಹಗಲು, ರಾತ್ರಿ ನಡುರಸ್ತೆಯಲ್ಲಿ ಕೊಲೆ ಯತ್ನ, ಅಮಾಯಕರ ಸುಲಿಗೆಯಂಥ ಪ್ರಕರಣಗಳು ನಡೆಯುತ್ತಿವೆ.

Kalburgi
ಪುಡಿ ರೌಡಿ ಗ್ಯಾಂಗ್
author img

By

Published : Jul 8, 2020, 11:57 AM IST

ಕಲಬುರಗಿ: ರಾತ್ರಿಯಾಗುತ್ತಿದ್ದಂತೆ ರಸ್ತೆಯಲ್ಲಿ ಹೋಗುವ ಅಮಾಯಕರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಹಣ ಹಾಗೂ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡುವ ಕಾರ್ಯದಲ್ಲಿ ಪುಡಾರಿ ಗ್ಯಾಂಗ್ ಸಕ್ರಿಯವಾಗಿದೆ. ಹೀಗಾಗಿ ರಾತ್ರಿ ಮನೆಯಿಂದ ಹೊರಬರಲು ನಗರದ ಜನತೆ ಭಯಪಡುವಂತಹ ಪರಿಸ್ಥಿತಿಯಿದೆ.

ನಗರದ ರಾಮ ಮಂದಿರ ರಿಂಗ್ ರಸ್ತೆ, ನಾಗನಳ್ಳಿ ಕ್ರಾಸ್, ಹಳೆ ಜೇವರ್ಗಿ ರಸ್ತೆಯ ಅಂಡರ್ ಬ್ರಿಡ್ಜ್​ ಬಳಿಯ ಶಾಸ್ತ್ರಿ ಚೌಕ್ ಸೇರಿದಂತೆ ಹಲವೆಡೆ ಜನರನ್ನು ಅಡ್ಡಗಟ್ಟಿ ಹಲ್ಲೆ ಮಾಡಿ ಹಣ, ಮೊಬೈಲ್ ದೋಚುವ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಸಾರ್ವಜನಿಕರು ಪ್ರಕರಣ ದಾಖಲಿಸಿಲ್ಲದ ಕಾರಣ ಇಂತಹ ಘಟನೆಗಳು ನಗರದಾದ್ಯಂತ ಮರುಕಳಿಸುತ್ತಿವೆ. ರಾತ್ರಿ 10 ಗಂಟೆ ನಂತರ ಮನೆಯಿಂದ ಹೊರಗೆ ಬರಲು ಭಯಪಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ.

ಪ್ರಕರಣ-1:

ಕಳೆದ ರಾತ್ರಿ 11 ಗಂಟೆಯ ಸುಮಾರಿಗೆ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಎನ್​ಡಬ್ಲ್ಯೂಕೆಆರ್​ಟಿಸಿ ಕಲಬುರಗಿ ಘಟಕ-1ರ ಚಾರ್ಜ್‌ಮನ್ ರತ್ನಪ್ಪ ಜೈನ್ ಅವರನ್ನು ಶ್ರೀಗುರು ಕಾಲೇಜು ಹತ್ತಿರ ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಹಲ್ಲೆ ಮಾಡಿ ಹಣ, ಹೆಲ್ಮೆಟ್ ಸೇರಿ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾರೆ.

ಪ್ರಕರಣ-2:

ಇತ್ತೀಚೆಗೆ ಐವಾನ್ ಶಾಹಿ ಪ್ರದೇಶದಲ್ಲಿ ನಡು ಮಧ್ಯಾಹ್ನ ವ್ಯಕ್ತಿಯ ಕೊಲೆ ಯತ್ನ ಪ್ರಕರಣ ನಡೆದಿತ್ತು. ಅದರಂತೆ ಸಾಯಂಕಾಲ 7 ಗಂಟೆ ಸುಮಾರಿಗೆ ಜನನಿಬಿಡ ಪ್ರದೇಶವಾದ ಹಳೆ ಜೇವರ್ಗಿ ರಸ್ತೆಯ ಅಂಡರ್​ಬ್ರಿಡ್ಜ್ ಬಳಿ ಪುಡಿ ರೌಡಿಗಳ ತಂಡವೊಂದು ಜನರೆದುರಿಗೇ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿತ್ತು.

ನಗರ ಪೊಲೀಸ್ ಆಯುಕ್ತರು ಹೇಳುವುದೇನು?:

ರಾತ್ರಿಯಾಗ್ತಿದ್ದಂತೆ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ಸುಲಿಗೆ ಮಾಡುವ ಕಾರ್ಯದಲ್ಲಿ ಕೆಲ ಪುಡಾರಿ ಗ್ಯಾಂಗ್​ಗಳು ಸಕ್ರಿಯವಾಗಿವೆ. ಇವರು ಕನ್ನಡದಲ್ಲಿ ಮಾತನಾಡುತ್ತಿದ್ದುದು ಗಮನಕ್ಕೆ ಬಂದಿದೆ. ಈ ಕೃತ್ಯಗಳು ಸ್ಥಳೀಯ ಜನರದ್ದೇ ಆಗಿದ್ದು, ಇಷ್ಟರಲ್ಲೇ ಅವರನ್ನು ಬಂಧಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎನ್.ಸತೀಶ್​ ಕುಮಾರ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.