ETV Bharat / state

ಚಿತ್ತಾಪುರ ಗ್ರಾಮಸ್ಥರಿಗೆ ನರಿ ದಾಳಿ ಭಯ, ಈಗಾಗಲೇ 6 ಜನರಿಗೆ ಗಾಯ - ನರಿ ದಾಳಿ

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಕದ್ದರಗಿ ಗ್ರಾಮದಲ್ಲಿ ನರಿ ದಾಳಿ ಮಾಡುತ್ತಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಠಿಸಿದೆ.

Fox attacking fear for chittapur taluk Villagers
ನರಿ ದಾಳಿಗೆ ಬೆಚ್ಚಿದ ಚಿತ್ತಾಪುರ ಗ್ರಾಮಸ್ಥರು
author img

By

Published : Aug 23, 2022, 7:40 AM IST

ಕಲಬುರಗಿ: ಚಿತ್ತಾಪುರ ತಾಲೂಕಿನ ಕದ್ದರಗಿ ಗ್ರಾಮದಲ್ಲಿ ನರಿ ದಾಳಿಗೆ ಜನ ಬೆಚ್ಚಿಬಿದ್ದಿದ್ದಾರೆ‌. ರಾತ್ರೋರಾತ್ರಿ ಪ್ರತ್ಯಕ್ಷವಾಗುವ ನರಿಗಳು ಗ್ರಾಮದ 6 ಜನರು ಹಾಗೂ ಒಂದು ಆಕಳ ಕರು ಮೇಲೆರಗಿ ಗಂಭೀರ ಗಾಯಗೊಳಿಸಿದೆ.

ದ್ಯಾವಪ್ಪ ದಂಡಗುಂಡ, ಮಲ್ಲಮ್ಮ, ದೊಡ್ಡಪ್ಪ ಕುಂಬಾರ ಎಂಬುವವರು ಗಾಯಗೊಂಡು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದ ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನರಿಗಳಿವೆ. ಬೆಳಗಿನ ಜಾವ ಗ್ರಾಮದ ಸುತ್ತಮುತ್ತ ಬರುತ್ತಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.

ನರಿ ದಾಳಿಗೆ ಬೆಚ್ಚಿದ ಚಿತ್ತಾಪುರ ಗ್ರಾಮಸ್ಥರು..

ರಾತ್ರಿ ವೇಳೆ ಜನರು ಓಡಾಡಲು ಭಯಪಡುತ್ತಿದ್ದಾರೆ. ನಿತ್ಯ ನಾಲ್ಕಾರು ನರಿಗಳು ಗ್ರಾಮದ ಹತ್ತಿರ ಓಡಾಡುವ ದೃಶ್ಯ ಕಂಡು ಬರುತ್ತಿದೆ. ಅರಣ್ಯ ಇಲಾಖೆ ಕೂಡಲೇ ಅರಣ್ಯ ಇಲಾಖೆ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: 22 ಶಾಲೆಗಳಿಗೆ ಜಿಲ್ಲಾಡಳಿತದಿಂದ ರಜೆ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.