ETV Bharat / state

ಶಾಸಕ ಅಜಯ್​ಸಿಂಗ್ ಈ ಹಿಂದೆ ಬಿಜೆಪಿ ಬಾಗಿಲು ತಟ್ಟಿದ್ದರು: ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ - etv bharat kannada

ಕಾಂಗ್ರೆಸ್​ ಶಾಸಕ ಅಜಯ್‌ಸಿಂಗ್ ಈ ಹಿಂದೆ ಬಿಜೆಪಿ ಬಾಗಿಲು ತಟ್ಟಿದ್ದರು, ಈಗ ಬಿಜೆಪಿಯನ್ನು ಕೋಮುವಾದಿ ಪಕ್ಷ ಎನ್ನುತ್ತಿದ್ದಾರೆ ಎಂದು ಮಾಜಿ ಶಾಸಕ ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ ಟೀಕಿಸಿದ್ದಾರೆ.

former-mla-doddappa-gowda-patil-naribola-reaction-on-mla-ajay-singh-in-kalaburagi
ಕಾಂಗ್ರೆಸ್ ಶಾಸಕ ಅಜಯಸಿಂಗ್ ಈ ಹಿಂದೆ ಬಿಜೆಪಿ ಬಾಗಿಲು ತಟ್ಟಿದ್ದರು: ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ
author img

By ETV Bharat Karnataka Team

Published : Sep 20, 2023, 3:40 PM IST

Updated : Sep 20, 2023, 4:12 PM IST

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ

ಕಲಬುರಗಿ: ಜೇವರ್ಗಿ ಕಾಂಗ್ರೆಸ್ ಶಾಸಕ, ಕೆಕೆಆರ್‌ಡಿಬಿ ಅಧ್ಯಕ್ಷ ಡಾ ಅಜಯ್‌ಸಿಂಗ್‌ಗೆ ಬಿಜೆಪಿ ಹಾಗೂ ಆರ್​ಎಸ್​ಎಸ್ ಮೇಲೆ ಒಲವಿದೆ. ಈ ಹಿಂದೆಯೇ ಬಿಜೆಪಿ ಸೇರಲು ಮುಂದಾಗಿದ್ದರು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ದೊಡ್ಡಪ್ಪಗೌಡ ಪಾಟೀಲ್ ‌ನರಿಬೋಳ ಹೊಸ ಬಾಂಬ್ ಸಿಡಿಸಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಶಾಸಕ ಡಾ. ಅಜಯ್‌ಸಿಂಗ್ ಬಿಜೆಪಿ ಬಾಗಿಲು ತಟ್ಟಿದ್ದರು ಎಂದು ಆರೋಪಿಸಿದರು.

ನಾನು ಅಂದು ಕಲಬುರಗಿ ಜಿಲ್ಲಾ ಗ್ರಾಮಾಂತರ ಬಿಜೆಪಿ ಅಧ್ಯಕ್ಷನಾಗಿದ್ದೆ. ಅಂದಿನ ಬಿಜೆಪಿ ಉಸ್ತುವಾರಿ ಮುರುಳಿಧರರಾವ್ ಮತ್ತು ರಾಜ್ಯಧ್ಯಕ್ಷರಾಗಿದ್ದ ಬಿ ಎಸ್ ಯಡಿಯೂರಪ್ಪ ನನ್ನ ಜೊತೆ ಮಾತನಾಡಿದ್ದರು. ಡಾ ಅಜಯ್‌ಸಿಂಗ್ ಬಿಜೆಪಿ ಸೇರಿಸಿಕೊಳ್ಳಬೇಕೋ, ಬೇಡವೋ ಅನ್ನೋದ್ರ ಬಗ್ಗೆ ಯಡಿಯೂರಪ್ಪನವರು ಚರ್ಚಿಸಿದ್ದರು. ಬಿಜೆಪಿ ಪಕ್ಷಕ್ಕೆ ಅಜಯ್‌ಸಿಂಗ್ ಸೇರ್ಪಡೆಯಿಂದ ಒಳ್ಳೆಯದಾದರೆ ಸೇರಿಸಿಕೊಳ್ಳೊಣ ಎಂದು ನಾನು ಹೇಳಿದ್ದೆ. ಕಾಂಗ್ರೆಸ್ ಮುಂದೆ ಇಟ್ಟಿದ್ದ ಬೇಡಿಕೆಗಳನ್ನು ಡಾ ಅಜಯ್‌ಸಿಂಗ್ ಬಿಜೆಪಿಗೂ ಇಟ್ಟಿದ್ದರು ಎಂದರು.

ರಾಜ್ಯ ಬಿಜೆಪಿ ನಾಯಕರ ಮುಂದೆ ಶಾಸಕ ಅಜಯ್‌ಸಿಂಗ್ ಮೂರು ಟಿಕೆಟ್‌ಗಾಗಿ ಡಿಮ್ಯಾಂಡ್ ಮಾಡಿದ್ದರು. ಅಜಯ್‌ಸಿಂಗ್ ಜೇವರ್ಗಿ ಕ್ಷೇತ್ರಕ್ಕೆ, ಸಹೋದರ ವಿಜಯಸಿಂಗ್ ಬಸವಕಲ್ಯಾಣ ಕ್ಷೇತ್ರಕ್ಕೆ, ಭಾವ ಚಂದ್ರಸಿಂಗ್ ಬೀದರ್ ಕ್ಷೇತ್ರಕ್ಕೆ ಟಿಕೆಟ್ ಡಿಮ್ಯಾಂಡ್ ಮಾಡಿದ್ದರು. ಅಂದು ಬಿಜೆಪಿ ಬಾಗಿಲು ತಟ್ಟಿದ ಅಜಯಸಿಂಗ್ ಈಗ ಬಿಜೆಪಿಯನ್ನು ಕೋಮುವಾದಿ ಪಕ್ಷ ಎನ್ನುತ್ತಿದ್ದಾರೆ ಎಂದು ದೊಡ್ಡಪ್ಪ ಗೌಡ ಪಾಟೀಲ್ ನರಿಬೋಳ ಟೀಕಿಸಿದರು.

ಇದೇ ವೇಳೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಬಲಪಡಿಸಲು ಹಾಗೂ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿಯಲ್ಲಿ ಕೋರ್​ ಕಮಿಟಿ ಸಭೆ ಆಯೋಜನೆ ಮಾಡಲಾಗಿದೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ತಿಳಿಸಿದರು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಗೆದ್ದಿದೆ. ಆದರೆ ಇದೀಗ ಯೋಜನೆಗಳಿಗೆ ಮಾನದಂಡ ಹಾಕಿ ರಾಜ್ಯದ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ ನಡೆದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಬೇಕು. ಬರಗಾಲ ಪೀಡಿತ ಪ್ರದೇಶವಾದ ಕಲಬುರಗಿ ಭಾಗದ ಜನರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹಾಗೂ ಜನರ ಕಷ್ಟಗಳಿಗೆ ಸ್ಪಂದಿಸಲು ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವ ಅವಶ್ಯಕತೆ ಇದೆ. ಹೀಗಾಗಿ ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಲ್ಲಿ ಜೆಡಿಎಸ್ ಕೋರ್​ ಕಮಿಟಿ ಸಭೆ ನಡೆಸಲಾಗುತ್ತಿದೆ. ಸೆ.26ರಂದು ಕಲಬುರಗಿಯಲ್ಲಿ ಸಭೆ ನಡೆಯಲ್ಲಿದ್ದು, ಸಭೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷ ಸುರೇಶ್ ಮಹಾಗಾಂವಕರ್, ಕೃಷ್ಣಾರೆಡ್ಡಿ, ಮಹೇಶ್ವರಿ ವಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಶಕ್ತಿ ಯೋಜನೆ ಎಫೆಕ್ಟ್?: ಸಾರಿಗೆ ಇಲಾಖೆಯ ಪ್ರಮುಖ ಯೋಜನೆಗಳಿಗಿಲ್ಲ ಅನುದಾನ

Last Updated : Sep 20, 2023, 4:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.