ETV Bharat / state

ಗ್ರಾಮ ಪಂಚಾಯತ್​ ಚುನಾವಣೆ ಪ್ರಚಾರಕ್ಕಿಳಿಯದಿರಲು ಗುತ್ತೇದಾರ್​ ನಿರ್ಧಾರ: ಕಾರಣ?

ಈ ಬಾರಿಯ ಗ್ರಾಮ ಪಂಚಾಯತ್​ ಚುನಾವಣೆ ಪ್ರಚಾರದಲ್ಲಿ ಭಾಗವಹಿಸದಿರಲು ನಿರ್ಧರಿಸಿರುವ ಗುತ್ತೇದಾರ್ ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಗ್ರಾಮ ಪಂಚಾಯತ್​ ಚುನಾವಣೆ ಶಾಸಕ ಎಂ. ವೈ. ಪಾಟೀಲ್ ಹಾಗೂ ನನ್ನ ನಡುವಿನ ಪ್ರತಿಷ್ಠೆಯ ಚುನಾವಣೆಯಲ್ಲ. ಇದು ಪಕ್ಷಾತೀತ ಚುನಾವಣೆ ಆಗಿರೋದರಿಂದ ನಾನು ಚುನಾವಣೆ ಪ್ರಚಾರದಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ. ಪ್ರಜೆಗಳು ಅಭಿವೃದ್ಧಿಯ ಇಚ್ಛಾಶಕ್ತಿ ಹೊಂದಿರುವ ಅಭ್ಯರ್ಥಿಗೆ ಮತ ಚಲಾಯಿಸಬೇಕು ಎಂದು ಕರೆ ಕೊಟ್ಟಿದ್ದಾರೆ.

former-minister-who-decides-not-to-campaign-for-gram-panchayat-election
ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರಕ್ಕಿಳಿಯದಿರಲು ನಿರ್ಧಾರಿಸಿದ ಮಾಜಿ ಸಚಿವ..ಕಾರಣ?
author img

By

Published : Dec 10, 2020, 2:09 PM IST

Updated : Dec 10, 2020, 2:59 PM IST

ಕಲಬುರಗಿ: ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್ ಚುನಾವಣೆ ಪ್ರಚಾರದಲ್ಲಿ ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ಕೂಡ ನೀಡಿದ್ದಾರೆ.

ಗ್ರಾಮ ಪಂಚಾಯತ್​ ಚುನಾವಣೆ ಪ್ರಚಾರಕ್ಕಿಳಿಯದಿರಲು ನಿರ್ಧರಿಸಿದ ಗುತ್ತೇದಾರ್​

ಚುನಾವಣೆ ಪ್ರಚಾರದಲ್ಲಿ ಭಾಗವಹಿಸದಿರಲು ನಿರ್ಧರಿಸಿರುವ ಗುತ್ತೇದಾರ್ ಈ ಬಗ್ಗೆ ಮಾತನಾಡಿ, ಗ್ರಾಮ ಪಂಚಾಯಿತಿ ಚುನಾವಣೆ ಶಾಸಕ ಎಂ. ವೈ. ಪಾಟೀಲ್ ಹಾಗೂ ನನ್ನ ನಡುವಿನ ಪ್ರತಿಷ್ಠೆಯ ಚುನಾವಣೆಯಲ್ಲ. ಇದೊಂದು ಪಕ್ಷಾತೀತ ಚುನಾವಣೆ ಆಗಿರುವುದರಿಂದ ನಾನು ಚುನಾವಣೆ ಪ್ರಚಾರದಲ್ಲಿ ಭಾಗವಹಿಸದೇ ಇರಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.

ಗ್ರಾಮ ಪಂಚಾಯತ್​ ಚುನಾವಣೆಯಲ್ಲಿ ಭಾಗವಹಿಸುವವರು ಹಿರಿಯರ ಆಶೀರ್ವಾದ ಪಡೆದು ನಾಮಪತ್ರ ಸಲ್ಲಿಸಿದರೆ ಸಾಕು, ಪ್ರಚಾರದ ಅವಶ್ಯಕತೆಯಿಲ್ಲ. ಗ್ರಾಮ ಪಂಚಾಯತ್​ನಲ್ಲಿ ಹಣ ಮಾಡುವ ದುರುದ್ದೇಶದಿಂದ ಸದಸ್ಯರಾಗಲು ಹೊರಟವರನ್ನು ಆಯ್ಕೆ ಮಾಡದೆ ಅಭ್ಯರ್ಥಿಯು ಗ್ರಾಮದ ಅಭಿವೃದ್ಧಿಗಾಗಿ ದುಡಿಯುವ ಇಚ್ಛಾಶಕ್ತಿ ಉಳ್ಳವರಾಗಿರಿಗೆ ಮತನೀಡಿ ಆಯ್ಕೆ ಮಾಡಿದರೆ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯ ಎಂದು ಮಾಲೀಕಯ್ಯ ಗುತ್ತೇದಾರ್ ಕರೆ ಕೊಟ್ಟಿದ್ದಾರೆ. ಮಾದರಿ ಗ್ರಾಮವೆಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಪಡೆದ ಗ್ರಾಮಕ್ಕೆ ವೈಯಕ್ತಿಕವಾಗಿ ನಗದು ಬಹುಮಾನ ನೀಡುವುದಾಗಿ ಗುತ್ತೇದಾರ್ ತಿಳಿಸಿದ್ದಾರೆ.

Last Updated : Dec 10, 2020, 2:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.