ಕಲಬುರಗಿ:ಸೂರ್ಯಗ್ರಹಣದ ವೇಳೆ ಆಹಾರ ಸೇವಿಸಬಾರದೆಂಬ ಮೌಢ್ಯತೆ ಹೊಡೆದೋಡಿಸಲು ಕಲಬುರಗಿಯಲ್ಲಿ ಭಾರತೀಯ ಜ್ಞಾನ ವಿಜ್ಞಾನ ಸಮಿತಿ ನೇತೃತ್ವದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಗ್ರಹಣ ಪ್ರಕೃತಿಯಲ್ಲಿ ನಡೆಯೋ ಸಹಜ ಪ್ರಕ್ರಿಯೆ. ಅದರಿಂದ ಕೆಟ್ಟದಾಗಲಿದೆ ಎಂಬುದು ಮೌಢ್ಯ. ಹೀಗಾಗಿ ಗ್ರಹಣಕ್ಕೆ ಯಾರೂ ಮೌಢ್ಯತೆಯ ಲೇಪನ ಮಾಡದಿರುವಂತೆ ಸಮಿತಿ ಸದಸ್ಯರು ಕರೆ ನೀಡಿದರು.