ಕಲಬುರಗಿ: ಕೊರೊನಾ ಸೋಂಕಿನಿಂದ ಜಿಲ್ಲೆಯಲ್ಲಿ ನಿನ್ನೆ ಮತ್ತೆ ಐವರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 219ಕ್ಕೆ ಏರಿಕೆಯಾಗಿದೆ.
ಯಡ್ರಾಮಿಯ 46 ವರ್ಷದ ಮಹಿಳೆ, ಕಲಬುರಗಿಯ ಗುಬ್ಬಿ ಕಾಲೋನಿ ನಿವಾಸಿ 82 ವರ್ಷದ ವೃದ್ಧ, ವಿದ್ಯಾನಗರದ 57 ವರ್ಷದ ಪುರುಷ, ರೆಹಮತ್ ನಗರದ 28 ವರ್ಷದ ಮಹಿಳೆ, ಜೈ ಹನುಮಾನ ನಗರ ತಾಂಡದ 80 ವರ್ಷದ ವೃದ್ಧ ಮೃತಪಟ್ಟಿದ್ದಾರೆ.
ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ಕಾಯಿಲೆಗಳನ್ನು ಹೊಂದಿದ್ದ ಇವರಿಗೆ ಕೊರೊನಾ ಸೋಂಕು ತಗುಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲಿ ಮೃತಪಟ್ಟಿದ್ದಾಗಿ ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ.
ನಿನ್ನೆ ಹೊಸದಾಗಿ 161 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 38 ಜನರು ರೋಗದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 11,712 ಮತ್ತು ಡಿಸ್ಚಾರ್ಜ್ ಆದವರ ಸಂಖ್ಯೆ 9,518 ಹಾಗೂ 1,984 ಆಕ್ಟಿವ್ ಪ್ರಕರಣಗಳಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.