ETV Bharat / state

ಗೋದಾಮಿಗೆ ಬೆಂಕಿ... ಲಕ್ಷಾಂತರ ಮೌಲ್ಯದ ವಸ್ತುಗಳು ಅಗ್ನಿಗಾಹುತಿ - kannada news

ಕಲಬುರಗಿಯಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಗೋದಾಮಿಗೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗೆ ಆಹುತಿಯಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗೋದಾಮಿಗೆ ಬೆಂಕಿ ಲಕ್ಷಾಂತರ ಮೌಲ್ಯದ ವಸ್ತುಗಳು ಅಗ್ನಿಗಾಹುತಿ
author img

By

Published : May 2, 2019, 10:44 PM IST

ಕಲಬುರಗಿ: ಹಣ್ಣು ಶೇಖರಿಸಿಟ್ಟಿದ್ದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನಾಶವಾದ ಘಟನೆ ನಗರದ ಸರ್ದಾರ್​ ವಲ್ಲಭಬಾಯಿ​ ಪಟೇಲ್ ವೃತ್ತದಲ್ಲಿ ನಡೆದಿದೆ.

ಪಟೇಲ್ ವೃತ್ತದಲ್ಲಿರುವ ಶಿಮ್ಲಾ ಫ್ರೂಟ್ಸ್ ಅಂಗಡಿಯ ಮಾಲೀಕ ಮೂಜಿಬ್ ಅಹ್ಮದ್​ ಎಂಬುವರಿಗೆ ಸೇರಿದ ಗೋದಾಮಿನಲ್ಲಿ ಹಣ್ಣು ಹಾಗೂ ಹಣ್ಣು ತುಂಬುವ ಪ್ಲಾಸ್ಟಿಕ್ ಟ್ರೇಗಳನ್ನು ಇಡಲಾಗಿತ್ತು. ಬೆಂಕಿ ಅವಘಡದಲ್ಲಿ ಹಣ್ಣು ಹಾಗೂ ಟ್ರೇಗಳು ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಗೋದಾಮಿಗೆ ಬೆಂಕಿ: ಲಕ್ಷಾಂತರ ಮೌಲ್ಯದ ವಸ್ತುಗಳು ನಾಶ

ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆ ಧಗಧಗಿಸಲು ಆರಂಭಿಸಿತ್ತು. ಗೋದಾಮು ಮಾತ್ರವಲ್ಲ, ಪಕ್ಕದ ಮನೆಗೂ ಬೆಂಕಿ ವಿಸ್ತರಿಸಿಕೊಂಡು ಹೊತ್ತಿ ಉರಿದಿದೆ. ಅದೃಷ್ಟವಶಾತ್​ ಮನೆಯಲ್ಲಿ ಯಾರೂ ವಾಸವಿರದ ಹಿನ್ನಲೆ ಯಾವುದೇ ರೀತಿ ಸಾವು-ನೋವು ಸಂಭವಿಸಿಲ್ಲ.

ಮನೆಯಲ್ಲಿನ ಹಳೆಯ ವಸ್ತುಗಳು, ಪಿಠೋಪಕರಣಗಳು ಸುಟ್ಟು ಭಸ್ಮವಾಗಿವೆ. ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ ಪರಿಣಾಮ ಕೆಲಹೊತ್ತು ಆತಂಕ ಮೂಡಿತ್ತು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Intro:ಕಲಬುರಗಿ: ಹಣ್ಣು ಶೇಖರಿಸಿಡಲಾದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತ ಮೌಲ್ಯದ ಹಾನಿಯಾದ ಘಟನೆ ನಗರದ ಸರ್ಧಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ನಡೆದಿದೆ. ಪಟೇಲ್ ವೃತ್ತದಲ್ಲಿರುವ ಶಿಮ್ಲಾ ಪ್ರೂಟ್ಸ್ ಅಂಗಡಿಯ ಮಾಲಿಕ ಮೂಜಿಬ್ ಅಹ್ಮೇದ್ ಎಂಬುವರಿಗೆ ಸೇರಿದ ಗೋದಾಮು ಇದಾಗಿದ್ದು, ಹಣ್ಣು ಹಾಗೂ ಹಣ್ಣು ತುಂಬವ ಪ್ಲ್ಯಾಸ್ಟಿಕ್ ಟ್ರೇಗಳು ಇಡಲಾಗಿತ್ತು. ಬೆಂಕಿ ಅವಘಡದಲ್ಲಿ ಹಣ್ಣು ಹಾಗೂ ಟ್ರೇಗಳು ಸುಟ್ಟು ಬಸ್ಮವಾಗಿವೆ. ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆ ಧಗಧಗಿಸಲು ಆರಂಭಿಸಿದೆ. ಗೋದಾಮು ಮಾತ್ರವಲ್ಲ ಪಕ್ಕದ ಮನೆಗೂ ಬೆಂಕಿ ವಿಸ್ತರಿಸಿಕೊಂಡು ಹೊತ್ತಿ ಉರಿದಿದೆ. ಅದೃಷ್ಟಕ್ಕೆ ಮನೆಯಲ್ಲಿ ಯಾರು ವಾಸವಿಲ್ಲ ಹೀಗಾಗಿ ಸಾವುನೋವು ಸಂಭವಿಸಿಲ್ಲ. ಮನೆಯಲ್ಲಿನ ಹಳೆಯ ವಸ್ತುಗಳು, ಪಿಠೋಪಕರನಗಳು ಸುಟ್ಟು ಬಸ್ಮವಾಗಿವೆ. ಅದೃಷ್ಪಕ್ಕೆ ಪಕ್ಕದಲ್ಲೆ ಇದ್ದ ಮೊಬೈಲ್ ಟವರ್ ದತ್ತ ಬೆಂಕಿ ಪಸರಿಸಿಲ್ಲ, ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ ಪರಿಣಾಮ ಕೇಲಹೊತ್ತು ಆಂತಕ ಹುಟ್ಟಿಹಾಕಿತ್ತು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.Body:ಕಲಬುರಗಿ: ಹಣ್ಣು ಶೇಖರಿಸಿಡಲಾದ ಗೋದಾಮಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತ ಮೌಲ್ಯದ ಹಾನಿಯಾದ ಘಟನೆ ನಗರದ ಸರ್ಧಾರ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ನಡೆದಿದೆ. ಪಟೇಲ್ ವೃತ್ತದಲ್ಲಿರುವ ಶಿಮ್ಲಾ ಪ್ರೂಟ್ಸ್ ಅಂಗಡಿಯ ಮಾಲಿಕ ಮೂಜಿಬ್ ಅಹ್ಮೇದ್ ಎಂಬುವರಿಗೆ ಸೇರಿದ ಗೋದಾಮು ಇದಾಗಿದ್ದು, ಹಣ್ಣು ಹಾಗೂ ಹಣ್ಣು ತುಂಬವ ಪ್ಲ್ಯಾಸ್ಟಿಕ್ ಟ್ರೇಗಳು ಇಡಲಾಗಿತ್ತು. ಬೆಂಕಿ ಅವಘಡದಲ್ಲಿ ಹಣ್ಣು ಹಾಗೂ ಟ್ರೇಗಳು ಸುಟ್ಟು ಬಸ್ಮವಾಗಿವೆ. ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ನೋಡು ನೋಡುತ್ತಿದ್ದಂತೆ ಧಗಧಗಿಸಲು ಆರಂಭಿಸಿದೆ. ಗೋದಾಮು ಮಾತ್ರವಲ್ಲ ಪಕ್ಕದ ಮನೆಗೂ ಬೆಂಕಿ ವಿಸ್ತರಿಸಿಕೊಂಡು ಹೊತ್ತಿ ಉರಿದಿದೆ. ಅದೃಷ್ಟಕ್ಕೆ ಮನೆಯಲ್ಲಿ ಯಾರು ವಾಸವಿಲ್ಲ ಹೀಗಾಗಿ ಸಾವುನೋವು ಸಂಭವಿಸಿಲ್ಲ. ಮನೆಯಲ್ಲಿನ ಹಳೆಯ ವಸ್ತುಗಳು, ಪಿಠೋಪಕರನಗಳು ಸುಟ್ಟು ಬಸ್ಮವಾಗಿವೆ. ಅದೃಷ್ಪಕ್ಕೆ ಪಕ್ಕದಲ್ಲೆ ಇದ್ದ ಮೊಬೈಲ್ ಟವರ್ ದತ್ತ ಬೆಂಕಿ ಪಸರಿಸಿಲ್ಲ, ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿದ ಪರಿಣಾಮ ಕೇಲಹೊತ್ತು ಆಂತಕ ಹುಟ್ಟಿಹಾಕಿತ್ತು. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.