ETV Bharat / state

ಒಂದೇ ರಸ್ತೆಯಲ್ಲಿ ಎರಡು ಪ್ರತ್ಯೇಕ ಅಪಘಾತ :ಕೋಳಿ ತುಂಬಿದ್ದ ಬೈಕ್​​ ಸುಟ್ಟು ಕರಕಲು! - ಕೋಳಿಗಳು ತುಂಬಿದ್ದ ದ್ವಿಚಕ್ರ ವಾಹನ

ಬೈಕ್ ಮೇಲೆ ಕೋಳಿಗಳನ್ನ ಸಾಗಿಸಿಕೊಂಡು ಹೋಗುತ್ತಿದ್ದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ಗಾಯಗೊಂಡ ಸವಾರ ಬೈಕ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ.

ಸುಟ್ಟು ಕರಕಲು
ಸುಟ್ಟು ಕರಕಲು
author img

By

Published : Jun 6, 2020, 11:03 PM IST

ಕಲಬುರಗಿ: ಜಿಲ್ಲೆಯ ಶಹಾಬಾದ್ ಬಳಿಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಹೊಂಡಾ ಬೈಕ್​ಗೆ​ ಆಕಸ್ಮಿಕವಾಗಿ ಬೆಂಕಿ ಹೊತ್ತಿ ಉರಿದ ಘಟನೆ ನಡೆದಿದೆ.

ಭಂಕೂರ ಕಡೆಯಿಂದ ಬರುತ್ತಿದ್ದ ಬೈಕ್ ಮೇಲೆ ಸುಮಾರು 25ಕ್ಕೂ ಹೆಚ್ಚು ಕೋಳಿಗಳನ್ನು ಸಾಗಿಸುತ್ತಿದ್ದನು. ಈ ವೇಳೆ ಬೈಕ್​ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಗಾಬರಿಗೊಂಡ ಸವಾರ ಬೈಕ್ ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಕುರಿತು ಶಹಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಳಿಗಳು ತುಂಬಿದ್ದ ಬೈಕ್​​ ಸುಟ್ಟು ಕರಕಲು

ಬೈಕ್ ಅಪಘಾತ ಓರ್ವ ಸಾವು:

loaded with chickens
ಅಪಘಾತದಲ್ಲಿ ಸಾವನಪ್ಪಿರುವ ಬೈಕ್ ಸವಾರ

ಇದೇ ಶಹಬಾದ್​​ ರಸ್ತೆಯಲ್ಲಿ ಬೈಕ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಇಸ್ಲಾಮಾಬಾದ್ ಕಾಲೋನಿ ನಿವಾಸಿ ಮಹ್ಮದ್ ಯೂನಸ್ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಈ ಕುರಿತು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.