ಸೇಡಂ: ಪಶುಗಳಿಗಾಗಿ ಕೊಂಡೊಯ್ಯುತ್ತಿದ್ದ ಮೇವಿಗೆ ಬೆಂಕಿ ತಗುಲಿದ್ದ ವೇಳೆ ಚಾಲಕನ ಚಾಣಾಕ್ಷತನದಿಂದ ಭಾರಿ ಅನಾಹುತವೊಂದು ತಪ್ಪಿದ ಘಟನೆ ತಾಲೂಕಿನ ಕೋಲಕುಂದಾ ಗ್ರಾಮದಲ್ಲಿ ನಡೆದಿದೆ.
ಕೋಲಕುಂದಾ ದೊಡ್ಡ ತಾಂಡಾದ ನಿವಾಸಿ ರಾಮು ನಾಯಕ ಪಶುಗಳಿಗಾಗಿ ಕಣಕಿ (ಮೇವು) ಟ್ರ್ಯಾಕ್ಟರನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಟ್ರ್ಯಾಲಿಯಲ್ಲಿದ್ದ ಮೇವಿಗೆ ಬೆಂಕಿ ತಗುಲಿದೆ. ಕೂಡಲೇ ಎಚ್ಚೆತ್ತುಕೊಂಡ ಚಾಲಕ ಮೇವು ಕೆಳಗೆ ಬೀಳುವಂತೆ ಮಾಡಿ, ತನ್ನ ಪ್ರಾಣ ಮತ್ತು ಟ್ರ್ಯಾಕ್ಟರ್‌ಗೆ ಆಗಬಹುದಾದ ಹಾನಿ ತಪ್ಪಿಸಿದ್ದಾರೆ.
ಈ ರೋಚಕ ಸನ್ನಿವೇಶವನ್ನು ಸ್ಥಳೀಯರು ತಮ್ಮ ಮೊಬೈಲನಲ್ಲಿ ಸೆರೆಹಿಡಿದಿದ್ದು,ಚಾಲಕನ ಸಾಹಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.