ಕಲಬುರಗಿ: ಬೆಳ್ಳಂಬೆಳಗ್ಗೆ ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ. ನಗರದ ಹುಮನಾಬಾದ್ ರಿಂಗ್ ರಸ್ತೆಯಲ್ಲಿ ಮಾಸ್ಕ್ ಹಾಕದೆ ಗುಟ್ಕಾ ಜಗಿಯುತ್ತಾ ಕಾರ್ನಲ್ಲಿ ಬಂದ ಅಧಿಕಾರಿಗೂ ಮುಲಾಜಿಲ್ಲದೆ ಪೊಲೀಸರು ದಂಡ ವಿಧಿಸಿದ್ದಾರೆ.
ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿ ಬಸವರಾಜ್ ಎಂಬುವವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಅನ್ನಭಾಗ್ಯ ಯೋಜನೆಯ ಇನ್ಸ್ಪೆಕ್ಟರ್ ಬಸವರಾಜ್ ಪೊಲೀಸ್ ತಪಾಸಣೆ ವೇಳೆ ನಾನು ಇನ್ಸ್ಪೆಕ್ಟರ್ ಎಂದು ಹೇಳಿ ಬಚಾವ್ ಆಗಲು ಯತ್ನಿಸಿ, ಪೊಲೀಸರ ಜೊತೆ ವಾಗ್ವಾದ ಕೂಡ ನಡೆಸಿದರು. ಬೆಳಗ್ಗೆಯಿಂದ ಕೆಲಸದಲ್ಲಿ ಬ್ಯುಸಿ ಇದ್ದೇನೆ, ಆನ್ ಡ್ಯೂಟಿ ಇದ್ದೇನೆ ಎಂದು ವಾದ ಮಾಡಿದರು.
ಇದನ್ನೂ ಓದಿ: ರೆಮ್ಡಿಸಿವಿರ್ ಇಂಜೆಕ್ಷನ್ ಮಾರಾಟ: ಖಾಸಗಿ ಆಸ್ಪತ್ರೆ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕ ಅರೆಸ್ಟ್
ನೈಟ್ ಡ್ರೆಸ್ನಲ್ಲಿದ್ದ ಅಧಿಕಾರಿಯ ಯಾವುದೇ ಮಾತಿಗೂ ಜಗ್ಗದ ಪೊಲೀಸರು, 250 ರೂ. ದಂಡ ಹಾಕಿದರು. ಪೊಲೀಸರು ಫೈನ್ ಹಾಕುವಾಗ ಹೆಸರು ಬದಲಾಯಿಸಿ ಹೇಳಿದ ಅಧಿಕಾರಿ, ತನ್ನ ನಿಜವಾದ ಹೆಸರು ಬಸವರಾಜ್ ಬದಲಾಗಿ ದಂಡದ ರಶೀದಿಯಲ್ಲಿ ದಶರಥ ಎಂದು ಬರೆಸಿ ದಂಡ ಕಟ್ಟಿ ಹೋದರು ಎನ್ನಲಾಗಿದೆ.