ETV Bharat / state

ಎಫ್‌ಡಿಎ ಪರೀಕ್ಷೆ ಅಕ್ರಮ ಆರೋಪ ಪ್ರಕರಣದ ಕಿಂಗ್​ ಪಿನ್ ಪಾಟೀಲ್ ಅರೆಸ್ಟ್.. ​ಠಾಣೆಗೆ ಕರೆತಂದ ಕಲಬುರಗಿ ಪೊಲೀಸರು - ಕಲಬುರಗಿ ಜಿಲ್ಲೆಯ ವಿಶೇಷ ಪೊಲೀಸ್ ತಂಡ

ಕೆಇಎ ಪರೀಕ್ಷಾ ಹಗರಣದ ಪ್ರಮುಖ ಆರೋಪಿ ಆರ್‌ಡಿ ಪಾಟೀಲ್​​ನ​ನ್ನು ಕಲಬುರಗಿ ಜಿಲ್ಲೆಯ ವಿಶೇಷ ಪೊಲೀಸ್ ತಂಡ ಮಹಾರಾಷ್ಟ್ರ ಗಡಿಯಲ್ಲಿ ಬಂಧಿಸಿ,​ ಠಾಣೆಗೆ ಕರೆತಂದಿದೆ.

ಆರ್​ ಡಿ ಪಾಟೀಲ್ ಅರೆಸ್ಟ್​​
ಆರ್​ ಡಿ ಪಾಟೀಲ್ ಅರೆಸ್ಟ್​​
author img

By ETV Bharat Karnataka Team

Published : Nov 10, 2023, 5:13 PM IST

Updated : Nov 11, 2023, 3:22 PM IST

ಎಫ್‌ಡಿಎ ಪರೀಕ್ಷೆ ಅಕ್ರಮ ಆರೋಪ ಪ್ರಕರಣದ ಕಿಂಗ್​ ಪಿನ್ ಪಾಟೀಲ್ ಅರೆಸ್ಟ್

ಕಲಬುರಗಿ: ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ಎಸೆಗಿರುವ ಆರೋಪ ಎದುರಿಸುತ್ತಿರುವ ಪ್ರಕರಣದ ಕಿಂಗ್‌ಪಿನ್ ಆರ್‌ಡಿ ಪಾಟೀಲ್​​ನನ್ನು ಜಿಲ್ಲೆಯ ವಿಶೇಷ ಪೊಲೀಸ್ ತಂಡ ಶುಕ್ರವಾರ ಸಂಜೆ ಬಂಧಿಸಿದೆ. ಮಹಾರಾಷ್ಟ್ರದ ಸೋಲಾಪುರ ಬಳಿ ಆತನನ್ನು ಬಂಧಿಸಲಾಗಿದ್ದು ರಾತ್ರಿ ಕಲಬುರಗಿಗೆ ಕರೆತರಲಾಗಿದೆ. ಬಂಧಿತ ಆರೋಪಿಯು ಎಫ್‌ಡಿಎ ಪರೀಕ್ಷಾ ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡಿ ಪರೀಕ್ಷೆ ಅಕ್ರಮ ಎಸಗಿರುವ ಆರೋಪದಲ್ಲಿ ಪೊಲೀಸರಿಗೆ ತಲೆನೋವಾಗಿದ್ದನು.

ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಆರ್‌ಡಿ ಪಾಟೀಲ್, ನವೆಂಬರ್​ 6 ರಂದು ನಗರದ ವರ್ಧಾ ಲೇಔಟ್‌ನ ಮಹಾಲಕ್ಷ್ಮಿ ಅಪಾರ್ಟ್ಮೆಂಟ್‌ ಹಿಂಭಾಗದ ಕಾಂಪೌಂಡ್ ಹಾರಿ ಎಸ್ಕೇಪ್ ಆಗಿದ್ದ. ಕಲಬುರಗಿ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದ. ಕೊನೆಗೂ ಪೊಲೀಸರು 7 ತಂಡ ರಚನೆ ಮಾಡಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಲಕ್ಷ ಲಕ್ಷ ರೂಪಾಯಿಗೆ ಡೀಲ್ ಮಾಡಿ ಅಭ್ಯರ್ಥಿಗಳಿಗೆ ಬ್ಲೂಟೂತ್ ನೀಡಿದ್ದ ಆರೋಪ ಈತನ ಮೇಲಿದೆ. ಈ ಹಿನ್ನೆಲೆ ಪಾಟೀಲ್​ ವಿರುದ್ಧ ಅಶೋಕ್ ನಗರ, ಗುಲ್ಬರ್ಗ ವಿವಿ ಠಾಣೆ ಮತ್ತು ಅಫಜಲಪುರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಬಂಧನವಾಗಿರುವ ಪರೀಕ್ಷೆ ಅಕ್ರಮದ ರೂವಾರಿ ಆರೋಪಿಯ​ನ್ನು ಪೊಲೀಸರು ತೀವ್ರ ವಿಚಾರಣೆ ನಡೆಸಲಿದ್ದಾರೆ.

ಆರೋಪಿ ಪಾಟೀಲ್​ಗೆ ಮನೆ ನೀಡಿದ್ದ ಆರೋಪದಲ್ಲಿ ಇಬ್ಬರ ಬಂಧನ: ಪಾಟೀಲ್‌ಗೆ ಮನೆ ನೀಡಿದ್ದ ಆರೋಪದ ಮೇಲೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮಿ ಅಪಾರ್ಟ್​ಮೆಂಟ್​​ ಫ್ಲ್ಯಾಟ್ ಮಾಲೀಕ ಹಾಗೂ ವ್ಯವಸ್ಥಾಪಕರು ನವೆಂಬರ್​ 5 ರಂದು ಆರೋಪಿಗೆ ಅಪಾರ್ಟ್​ಮೆಂಟ್​ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಿದ್ದರು. ಒಂದು ರಾತ್ರಿ ಇಲ್ಲಿ ತಂಗಿದ್ದ ಆರೋಪಿ ಪಾಟೀಲ್​, ಮಾರನೇ ದಿನ ಪೊಲೀಸರು ಆಗಮಿಸಿರುವ ಮಾಹಿತಿ ಪಡೆದು ಅಪಾರ್ಟ್​ಮೆಂಟ್​ನ ಹಿಂಬದಿಯ ಕಂಪೌಂಡ್​ ಜಿಗಿದು ಪರಾರಿಯಾಗಿದ್ದನು.

ಈ ಹಿನ್ನೆಲೆ ಆರ್‌ಡಿ ಪಾಟೀಲ್‌ಗೆ ಫ್ಲ್ಯಾಟ್ ಬಾಡಿಗೆ ನೀಡಿದ ತಪ್ಪಿಗೆ ಫ್ಲ್ಯಾಟ್ ಮಾಲೀಕ ಮತ್ತು ಅಪಾರ್ಟ್​ಮೆಂಟ್​ ವ್ಯವಸ್ಥಾಪಕನ ಬಂಧನವಾಗಿದೆ‌‌. ಆರ್‌ಡಿ ಪಾಟೀಲ್​ನಿಂದ ಹತ್ತು ಸಾವಿರ ರೂ. ಅಡ್ವಾನ್ಸ್ ಪಡೆದು, ಆ ಹಣವನ್ನು ಫ್ಲ್ಯಾಟ್ ಮಾಲೀಕ ಶಂಕರ್ ಗೌಡಗೆ ವ್ಯವಸ್ಥಾಪಕ ದಿಲೀಪ್ ಕೊಟ್ಟಿದ್ದನಂತೆ. ಅಲ್ಲಿ ಹೆಸರು ಕೂಡಾ ಬಸವರಾಜ ಅಂತ ಸುಳ್ಳು ಹೇಳಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಕೆಇಎ ಅಕ್ರಮದ ಆರೋಪಿ ಆರ್.ಡಿ.ಪಾಟೀಲ್​ಗೆ ಮನೆ ನೀಡಿದ ಆರೋಪದ ಮೇಲೆ ಇಬ್ಬರ ಬಂಧನ

Last Updated : Nov 11, 2023, 3:22 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.