ಕಲಬುರಗಿ: ಚಿಂಚೋಳಿ ತಾಲೂಕಿನ ಭೈರಂಪಳ್ಳಿ ಗ್ರಾಮದಲ್ಲಿ ಹೆತ್ತ ಮಕ್ಕಳಿಗೆ ವಿಷ ಉಣಿಸಿ ಕೊಲೆಗೈದು ತಲೆ ಮರೆಸಿಕೊಂಡಿದ್ದ ಪಾಪಿ ತಂದೆ ತೆಲಂಗಾಣದ ತಾಂಡೂರ್ ರೈಲ್ವೆ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಸಂಜೀವ್ ಕುಮಾರ್ ಶವ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಹೆತ್ತ ಮಕ್ಕಳನ್ನು ಕೊಂದ ಪಾಪ ಪ್ರಜ್ಞೆಯಲ್ಲಿ ರೈಲಿಗೆ ತೆಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಭೈರಂಪಳ್ಳಿ ಗ್ರಾಮದ ಸಂಜೀವ್‌ಕುಮಾರ್ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳು ರೋಹಿತಾ(4), ಪರ್ವಿನ್(3)ಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಇದೀಗ ಆತನ ಛಿದ್ರಗೊಂಡ ಶವವಾಗಿ ಪತ್ತೆಯಾಗಿದೆ. ಈ ಕುರಿತು ಮಿರಿಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.