ETV Bharat / state

ಪ್ರತಿ ಎಕರೆಗೆ ₹20 ಸಾವಿರ ಪರಿಹಾರ ಘೋಷಿಸುವಂತೆ ರೈತಸಂಘ ಆಗ್ರಹ - Center for Agricultural Sciences

ಕೃಷಿ ವಿಜ್ಞಾನ ಕೇಂದ್ರ ಇರುವುದರಿಂದ ಪ್ರತಿವರ್ಷ ಕೃಷಿ ಮೇಳ ಹಮ್ಮಿಕೊಳ್ಳಬೇಕು. ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಪ್ರತಿದಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ..

Farmers Association demands on compensation
ಪ್ರತಿ ಎಕರೆಗೆ 20 ಸಾವಿರ ರೂಪಾಯಿ ಪರಿಹಾರ ಘೋಷಿಸುವಂತೆ ರೈತಸಂಘ ಆಗ್ರಹ
author img

By

Published : Sep 1, 2020, 7:31 PM IST

ಕಲಬುರಗಿ : ಸತತ ಮಳೆಯಿಂದ ಹೆಸರು, ಉದ್ದು, ಸೋಯಾಬಿನ್ ಬಿತ್ತನೆ ಬೆಳೆ ಹಾನಿಯಾಗಿದೆ. ಕೂಡಲೇ ಪ್ರತಿ ಎಕರೆಗೆ ರೂ.20 ಸಾವಿರ ಪರಿಹಾರ ಘೋಷಿಸಬೇಕು ಎಂದು ಕಲ್ಯಾಣ ಕರ್ನಾಟಕ ರೈತಪರ ಸಂಘದ ಕಾರ್ಯದರ್ಶಿ ಬಿ ಬಿ ನಾಯಕ್​ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೂಡಲೇ ಹೆಸರು, ಉದ್ದು ಖರೀದಿ ಕೇಂದ್ರ ಪ್ರಾರಂಭ ಮಾಡಬೇಕು ಎಂದು ಒತ್ತಾಯಿಸಿದರು. 15 ರೂಪಾಯಿಗೆ ಇದ್ದ ಪಹಣಿಯನ್ನು 5 ರೂಪಾಯಿಗೆ ನೀಡುವ ವ್ಯವಸ್ಥೆ ಮಾಡಬೇಕು. 2000 ಸಾವಿರ ರೂಪಾಯಿ ಮಾಶಾಸನ ಕೊಡಬೇಕು ಎಂದು ಆಗ್ರಹಿಸಿದರು.

ಕಲ್ಯಾಣ ಕರ್ನಾಟಕ0 ರೈತಪರ ಸಂಘದ ವತಿಯಿಂದ ಬೇಡಿಕೆಗಳ ಈಡೇರಿಸುವಂತೆ ಆಗ್ರಹ

ಅಲ್ಲದೆ ಕೃಷಿ ವಿಜ್ಞಾನ ಕೇಂದ್ರ ಇರುವುದರಿಂದ ಪ್ರತಿವರ್ಷ ಕೃಷಿ ಮೇಳ ಹಮ್ಮಿಕೊಳ್ಳಬೇಕು. ನಷ್ಟವಾಗಿರುವ ಬೆಳೆ ಸಮೀಕ್ಷೆ ಮಾಡಿ ರೈತರಿಗೆ ಪರಿಹಾರ ನೀಡಬೇಕು. ಪ್ರತಿದಿನ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೂಡಲೇ ರಾಷ್ಟ್ರೀಕೃತ ಬ್ಯಾಂಕುಗಳ ಸಾಲಾ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.