ETV Bharat / state

ಬಿಜೆಪಿ ಎಂಎಲ್‌ಸಿಗಳ ಹೆಸರು ಸೇರ್ಪಡೆ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ: ಡಾ.ಶರಣಪ್ರಕಾಶ್ ಪಾಟೀಲ್ - ಡಾ.ಶರಣಪ್ರಕಾಶ ಪಾಟೀಲ ಸುದ್ದಿಗೋಷ್ಠಿ

ಕಲಬುರಗಿಗೆ ಸಂಬಂಧವಿಲ್ಲದ ಹಾಗೂ ಕಲಬುರಗಿಯಲ್ಲಿ ಒಂದು ದಿನ ವಾಸ್ತವ್ಯ ಹೂಡದ ವ್ಯಕ್ತಿಗಳು ಹೇಗೆ ಇಲ್ಲಿಯ ನಿವಾಸಿಗಳಾಗುತ್ತಾರೆ ಎಂದು ಪ್ರಶ್ನಿಸಿರುವ ಶರಣಪ್ರಕಾಶ್ ಪಾಟೀಲ್, ಎಮ್‌ಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ಚುನಾವಣಾ ಆಯೋಗದ ಕೆಲವೊಂದು ಮಾರ್ಗಸೂಚಿಗಳಿವೆ, ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಹೇಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡುತ್ತಾರೆ ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರಗಿಯಲ್ಲಿ ಡಾ.ಶರಣಪ್ರಕಾಶ ಪಾಟೀಲ ಸುದ್ದಿಗೋಷ್ಠಿ

author img

By

Published : Nov 16, 2021, 8:23 PM IST

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಕ್ರಮವಾಗಿ ಏಳು ಜನ ಬಿಜೆಪಿ ಎಮ್‌ಎಲ್‌ಸಿಗಳ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಯತ್ನ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಡಾ.ಶರಣಪ್ರಕಾಶ್ ಪಾಟೀಲ್ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಲಬುರಗಿಗೆ ಸಂಬಂಧವಿಲ್ಲದ ಹಾಗೂ ಕಲಬುರಗಿಯಲ್ಲಿ ಒಂದು ದಿನ ವಾಸ್ತವ್ಯ ಹೂಡದ ವ್ಯಕ್ತಿಗಳು ಹೇಗೆ ಇಲ್ಲಿಯ ನಿವಾಸಿಗಳಾಗುತ್ತಾರೆ ಎಂದು ಪ್ರಶ್ನಿಸಿರುವ ಶರಣಪ್ರಕಾಶ್ ಪಾಟೀಲ್, ಎಮ್‌ಎಲ್‌ಸಿ ಚುನಾವಣೆಗೆ ಸ್ಪರ್ಧಿಸಲು ಚುನಾವಣಾ ಆಯೋಗದ ಕೆಲವು ಮಾರ್ಗಸೂಚಿಗಳಿವೆ, ಆದರೆ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಿ ಹೇಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಾಪ್ ಸಿಂಹ ವಿರುದ್ಧ ಕಿಡಿ:

ಶಾಸಕ ಪ್ರಿಯಾಂಕ ಖರ್ಗೆ ಗಂಡೋ ಹೆಣ್ಣೋ ಅನ್ನೋ ಪ್ರತಾಪ್ ಸಿಂಹ ಹೇಳಿಕೆ, ಅವರ ಸಂಸ್ಕೃತಿ ಏನೆಂದು ತೊರಿಸಿಕೊಡುತ್ತದೆ. ಅವರು ತಮ್ಮ ಸಂಸ್ಕೃತಿ ರೀತಿಯಲ್ಲೇ ಮಾತಾಡಿದ್ದಾರೆ. ಪ್ರಿಯಾಂಕ್ ಖರ್ಗೆ ಗಂಡೋ ಹೆಣ್ಣೋ ಅವರಿಗೆ ಗೊತ್ತಿಲ್ಲವೋ, ಅದು ರಾಜ್ಯಕ್ಕೆ ಗೊತ್ತಿದೆ. ಅವಿವೇಕಿ ತರಹ ಸಂಸದ ಪ್ರತಾಪ್ ಸಿಂಹ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬಿಟ್‌ಕಾಯಿನ್ ಪ್ರಕರಣ ಸರ್ಕಾರ, ಸಿಎಂಗೆ ಮುಜುಗರ ಉಂಟುಮಾಡಿದೆ. 5 ಸಾವಿರ ಬಿಟ್‌ಕಾಯಿನ್ ಹ್ಯಾಕ್ ಆಗಿದೆ ಎಂದು ಬೆಳಕಿಗೆ ಬಂದಿದೆ. ಬಿಟ್‌ಕಾಯಿನ್ ಹ್ಯಾಕ್ ಪೊಲೀಸ್ ಇಲಾಖೆ ಮಾಡಿದೆಯಾ?, ಬಿಟ್‌ಕಾಯಿನ್ ಹ್ಯಾಕ್ ಮಾಡಿಸಿ ಕೆಲವು ರಾಜಕಾರಣಿಗಳು ಹಣ ಪಡೆದಿರೋ ಬಗ್ಗೆ ಗುಮಾನಿ ಇದೆ.

ಈ ಕುರಿತು ಸೂಕ್ತ ತನಿಖೆ ನಡೆಯೋ ಬಗ್ಗೆ ನಮಗೆ ಭರವಸೆ ಇಲ್ಲ. ಪಾರದರ್ಶಕ ತನಿಖೆ ನಡದರೆ ಸತ್ಯಾಸತ್ಯತೆ ಹೊರಬರುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.