ETV Bharat / state

ಮದುವೆಯಲ್ಲಿಯೇ ಮದುಮಗನಿಂದ ದೊಡ್ಡಾಟ: ರಂಗ ಪದವೀಧರನ ಜನಪದ ಕಾಳಜಿ..! - ಸೇಡಂ ದೊಡ್ಡಾಟ ಸುದ್ದಿ

ಸೇಡಂ ತಾಲೂಕಿನ ಗಡಿ ಗ್ರಾಮ, ತೆಲುಗನ್ನಡದ ನೆಲ ಜಾಕನಪಲ್ಲಿ ಗ್ರಾಮದ ಮೈಸೂರು ರಂಗಾಯಣದ ರಂಗ ಪದವೀಧರ ಸಿದ್ದಪ್ಪ ಅವರು ತಮ್ಮ ಮದುವೆಯಲ್ಲಿ ದೊಡ್ಡಾಟದ ನೃತ್ಯ ಮಾಡಿ ಕಲೆಯ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

ಮದುಮಗನಿಂದ ದೊಡ್ಡಾಟ ನೃತ್ಯ
ಮದುಮಗನಿಂದ ದೊಡ್ಡಾಟ ನೃತ್ಯ
author img

By

Published : Jan 5, 2021, 4:58 PM IST

ಸೇಡಂ (ಕಲಬುರಗಿ): ದೊಡ್ಡಾಟ, ಸಣ್ಣಾಟ ಈ ಪದಗಳು ಇಂದಿನ ಪೀಳಿಗೆಯ ಕೆಲ ಯುವಕರಿಗೆ ಗೊತ್ತಿರಲಿಕ್ಕಿಲ್ಲ. ಹಿರಿಯರು ಬಿಟ್ಟು ಹೋದ ಈ ವಿಶಿಷ್ಟ ಕಲೆಯ ಉಳಿವಿಗಾಗಿ ಸಣ್ಣಪುಟ್ಟ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಆದರೆ ಫಲಿತಾಂಶ ಮಾತ್ರ ಶೂನ್ಯ.

ಅಳಿವಿನ ಅಂಚಿನಲ್ಲಿರುವ ದೊಡ್ಡಾಟ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ತಾಲೂಕಿನ ಗಡಿ ಗ್ರಾಮ, ತೆಲುಗನ್ನಡದ ನೆಲ ಜಾಕನಪಲ್ಲಿ ಗ್ರಾಮದ ಸಿದ್ದಪ್ಪ ಅವರು ತಮ್ಮ ಮದುವೆಯಲ್ಲಿ ದೊಡ್ಡಾಟದ ಹೆಜ್ಜೆಗಳನ್ನು ಹಾಕಿ ಗಮನಸೆಳೆದಿದ್ದಾರೆ. ಸಿದ್ಧಪ್ಪ ಮೈಸೂರು ರಂಗಾಯಣದ ರಂಗ ಪದವೀಧರರೂ ಆಗಿದ್ದಾರೆ.

ಮದುಮಗನಿಂದ ದೊಡ್ಡಾಟ ನೃತ್ಯ

ಕೈಯಲ್ಲಿ ಅರಿಗೆ ಬಿಲ್ಲು, ಬಾಣ, ಕಿರೀಟಗಳನ್ನು ತೊಟ್ಟು 10 ನಿಮಿಷಗಳ ಕಾಲ ದೊಡ್ಡಾಟದ 3 ಹಾಡುಗಳ ತಾಳಕ್ಕೆ ಹೆಜ್ಜೆ ಹಾಕಿರುವ ಇವರು ವಿಶಿಷ್ಟ ಜನಪದ ಕಲೆಯನ್ನು ರಕ್ಷಿಸಲು ಅರಿವು ಮೂಡಿಸಿದ್ದಾರೆ.

ಇದನ್ನು ಓದಿ: ಶಾಸಕರೊಂದಿಗಿನ ಸಿಎಂ ಸಮಾಲೋಚನಾ ಸಭೆ ಮುಕ್ತಾಯ: ಸಂಜೆ ಡಿಸಿಎಂಗಳ ಜಂಟಿ‌ ಸುದ್ದಿಗೋಷ್ಠಿ

ತೆಲುಗು ಮತ್ತು ಕನ್ನಡ ಭಾಷಿಕರಿರುವ ಜಾಕನಪಲ್ಲಿ ಗ್ರಾಮವು ಗಡಿ ಭಾಗದಲ್ಲಿದೆ. ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ನಾಟಕ ನಿರ್ದೇಶಕ ಅಶೋಕ ತೊಟ್ನಳ್ಳಿ ಹಲವಾರು ವರ್ಷಗಳಿಂದ ಜಾನಪದ ಕಲೆಯ ರಕ್ಷಣೆಯ ಜೊತೆಗೆ ಮಕ್ಕಳಿಗೆ ನಾಟಕ ಕಲಿಸಿ, ರಾಜ್ಯ ಮಟ್ಟದಲ್ಲಿ ಪ್ರಯೋಗಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಅವರ ಗರಡಿಯಲ್ಲಿ ಪಳಗಿದ ಅನೇಕರು ಇಂದಿಗೂ ಸಹ ರಂಗಕಲೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ. ಈ ಸಾಲಿನಲ್ಲಿ ರಂಗ ಪದವೀಧರ ಸಿದ್ದಪ್ಪ ಸಹ ಒಬ್ಬರು.

ಏನಿದು ದೊಡ್ಡಾಟ? ಇಲ್ಲಿದೆ ವಿವರ..

ಜನಪದ ಕಲೆಗಳಲ್ಲಿ ದೊಡ್ಡಾಟ ಕಲೆಯು ಬಹು ವಿಶಿಷ್ಟ. ಇದರಲ್ಲಿ ದೊಡ್ಡಾಟ, ಸಣ್ಣಾಟ ಎಂಬ ಎರಡು ಬಗೆಗಳಿವೆ. ದೊಡ್ಡಾಟವನ್ನು ಉತ್ತರ ಕರ್ನಾಟಕದ ಗಂಡು ಕಲೆ ಅಂತಲೂ ಕರೆಯಲಾಗುತ್ತದೆ. ದೊಡ್ಡಾಟದ ಕತೆಗಾರ ಮತ್ತು ಸಾರಥಿಯ ಪಾತ್ರಗಳು ಬಹು ವೈಶಿಷ್ಟ್ಯತೆಯಿಂದ ಕೂಡಿರುತ್ತವೆ. ತಮ್ಮ ಚಾಕಚಕ್ಯತೆ, ನಟನಾ ಕೌಶಲ್ಯ ಮತ್ತು ನವರಸಗಳೊಂದಿಗೆ ಪ್ರದರ್ಶಿಸುವ ಪಾತ್ರಗಳು ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.

ಪೌರಾಣಿಕ ಕತೆಯನ್ನು ಮೂಲ ಆಧಾರವಾಗಿಟ್ಟು ದೊಡ್ಡಾಟಗಳು ಪ್ರದರ್ಶನಗೊಳ್ಳುತ್ತವೆ. ಇಡೀ ರಾತ್ರಿಯೆಲ್ಲಾ ಆಟಗಳು ನಡೆದು ಸೂರ್ಯೋದಯದ ವೇಳೆಗೆ ಮುಕ್ತಾಯವಾಗುತ್ತವೆ. ದೊಡ್ಡಾಟ ಪ್ರದರ್ಶನಕ್ಕೆ ಹತ್ತು ದಿನ ಇರುವಾಗಲೇ ಗ್ರಾಮದ ವಿಶಾಲವಾದ ಪ್ರದೇಶವನ್ನು ಗುರುತಿಸಿ ಅಲ್ಲಿ ಹಂದರಗಂಬವನ್ನು ನೆಡಲಾಗುತ್ತದೆ. ಇದೇ ಕಂಬ ಪ್ರಚಾರದ ಮುಖ್ಯ ಕೇಂದ್ರಬಿಂದುವೆನಿಸಿಕೊಳ್ಳುತ್ತದೆ. ದೊಡ್ಡಾಟಕ್ಕೆ ಮತ್ತೊಂದು ಜೀವಾಳ ಭಾಗವತರು. ಇವರ ಅಣತಿಯಂತೆ ಇಡೀ ಆಟ ಪ್ರದರ್ಶನಗೊಳ್ಳುತ್ತದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.