ಕಲಬುರಗಿ: ರೂಪಾಂತರ ಕೊರೊನಾ ಹರಡುವಿಕೆ ಭೀತಿ ಹಿನ್ನೆಲೆ ಹೊಸ ವರ್ಷಾಚರಣೆ ಸರಳವಾಗಿರಲಿ ಎಂದು ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಜಿಲ್ಲೆಯ ಜನರಲ್ಲಿ ಮನವಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ, ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಮಾಡುವುದು ಬೇಡ. ತಮ್ಮ-ತಮ್ಮ ಮನೆಗಳಲ್ಲಿಯೇ ಕುಟುಂಬದ ಜೊತೆ ಮಾತ್ರ ಹೊಸ ವರ್ಷಾಚರಣೆಯ ಕ್ಷಣಗಳನ್ನು ಕಳೆಯಿರಿ ಎಂದು ಸಲಹೆ ನೀಡಿದ್ದಾರೆ. ಕೊರೊನಾ ಹಿನ್ನೆಲೆ ಜನರು ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ರೂಪಾಂತರ ಕೊರೊನಾ ಅಬ್ಬರ : 20 ಮಂದಿಗೆ ತಗುಲಿದ ಪರಿವರ್ತಿತ ಸೋಂಕು
ಹೊಸ ವರ್ಷಾಚರಣೆ ತಡೆಯಲು ಸೆಕ್ಷನ್ 144 ಅನುಷ್ಠಾನ ಮಾಡಲಾಗುತ್ತಿಲ್ಲ. ರಾತ್ರಿ ಕರ್ಫ್ಯೂ ಸಹ ಹಿಂದಕ್ಕೆ ಪಡೆಯಲಾಗಿದೆ. ಬಾರ್ & ರೆಸ್ಟೋರೆಂಟ್ಗಳಲ್ಲಿ ಇವೆಂಟ್ಸ್ ನಡೆಸಲು ಅವಕಾಶ ಇರುವದಿಲ್ಲ. ಬಾರ್ & ರೆಸ್ಟೋರೆಂಟ್ಗಳ ಕ್ಲೋಸಿಂಗ್ ಟೈಮಿಂಗ್ಸ್ ನಿತ್ಯದಂತೆ ಇರಲಿದೆ. ಹೊಸ ವರ್ಷಕ್ಕಾಗಿ ಹೊಸ ನಿಯಮಗಳೇನೂ ಇಲ್ಲ. ಆದರೆ ಜನರು ಮಾತ್ರ ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಆಚರಣೆ ಮಾಡುವಂತೆ ಡಿಸಿ ಮನವಿ ಮಾಡಿದ್ದಾರೆ.