ETV Bharat / state

ಕಲಬುರಗಿ ಪಾಲಿಕೆ ಚುನಾವಣೆ: ಜಿಲ್ಲಾಡಳಿತದಿಂದ ಸಕಲ ಸಿದ್ಧತೆ

ಶುಕ್ರವಾರ ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

prepared for municipal corporation election
ಚುನಾವಣೆಗೆ ಸಿದ್ಧತೆ
author img

By

Published : Sep 2, 2021, 9:50 PM IST

ಕಲಬುರಗಿ: ಮಹಾನಗರ ಪಾಲಿಕೆ ಚುನಾವಣೆಗೆ ಶುಕ್ರವಾರ ಬೆಳಿಗ್ಗೆಯಿಂದ ವೋಟಿಂಗ್​​ ನಡೆಯಲಿದ್ದು, ಶಾಂತಿಯುತ ಮತದಾನಕ್ಕಾಗಿ ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ.

ಪಾಲಿಕೆ ಚುನಾವಣೆಗೆ ಜಿಲ್ಲಾಡಳಿತದಿಂದ ಸಿದ್ಧತೆ

ಸುಮಾರು 55 ಸದಸ್ಯ ಬಲ ಹೊಂದಿರುವ ಕಲಬುರಗಿ ಪಾಲಿಕೆ ಚುನಾವಣೆ ಅಖಾಡದಲ್ಲಿ 300 ಅಭ್ಯರ್ಥಿಗಳಿದ್ದಾರೆ. ಕಾಂಗ್ರೆಸ್-55, ಬಿಜೆಪಿ- 47, ಜೆಡಿಎಸ್- 46, ಆಮ್ ಆದ್ಮಿ - 26, ಬಿಎಸ್​​​ಪಿ- 6 ಹಾಗೂ ಇತರೆ ಪಕ್ಷೇತರ-120 ಸೇರಿ ಒಟ್ಟು 300 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಮತದಾನಕ್ಕಾಗಿ 533 ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ. ಮಹಿಳೆ, ಪುರುಷ, ಇತರೆ ಸೇರಿ ಒಟ್ಟು 5 ಲಕ್ಷ 19 ಸಾವಿರಕ್ಕೂ ಹೆಚ್ಚು ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ನಗರದ ಎನ್​​​ವಿ ಕಾಲೇಜು ಮೈದಾನದಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದ್ದು, ವೋಟಿಂಗ್ ಕರ್ತವ್ಯಕ್ಕೆ 2,570 ಪೋಲಿಂಗ್ ಸಿಬ್ಬಂದಿ ಹಾಗೂ ಚುನಾವಣಾ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ.

ಅತೀ ಹೆಚ್ಚು ಮತದಾನಕ್ಕಾಗಿ ಹಾಗೂ ಮಹಿಳೆ ಮತದಾರರನ್ನು ಸೆಳೆಯಲು ಜಿಲ್ಲಾಡಳಿತ ಪಿಂಕ್ ಮತಗಟ್ಟೆಗಳನ್ನು ಸ್ಥಾಪನೆ ಮಾಡುತ್ತಿದೆ. ಇದರ ಜೊತೆಗೆ ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.

ಮತದಾನ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ 200 ಹೋಮ್ ಹಾರ್ಡ್ಸ್, 36 ಪೊಲೀಸ್ ಇನ್​ಸ್ಪೆಕ್ಟರ್​​, ಇಬ್ಬರು ಡಿಸಿಪಿ, 16 ಎಸಿಪಿ, ಸಿಪಿಐ, ಪಿಎಸ್​​​​ಐ, ಎಎಸ್​​​ಐ, 796 ಪೊಲೀಸ್ ಕಾನ್​ಸ್ಟೇಬಲ್​​​ಗಳು ಸೇರಿದಂತೆ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಪೊಲೀಸ್​ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಅಪ್ರಾಪ್ತ ಮಗಳ ಮೇಲೆ ಮೂರು ವರ್ಷಗಳ ಕಾಲ ಅತ್ಯಾಚಾರ: ಅಪರಾಧಿಗೆ ಮೂರು ಜೀವಾವಧಿ ಶಿಕ್ಷೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.