ಕಲಬುರಗಿ: ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರು, ಕೊರೊನಾ ಕಿಟ್ ಹಂಚಿಕೆಯಲ್ಲಿ ಹಣದ ಬೇಡಿಕೆ ಇಟ್ಟಿದ್ದಾರೆಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ್ ಸಂಗಾ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಸಂಗಾ, ಇಲ್ಲಿಗೆ ತಾವು ಅಧಿಕಾರಿಯಾಗಿ ಬರುವುದು ಶಾಸಕರಿಗೆ ಇಷ್ಟವಿರಲಿಲ್ಲ, ತಮ್ಮ ಓರ್ವ ಹಳೆಯ ಶಿಷ್ಯನನ್ನು ತರಲು ಪ್ರಯತ್ನಿಸಿದ್ದರು. ಸರ್ಕಾರದ ಆದೇಶದಂತೆ ನಾನು ಅಧಿಕಾರಿಯಾಗಿ ಇಲ್ಲಿ ನೇಮಕವಾಗಿ ಬಂದಿದ್ದೇನೆ. ಶಾಸಕರ ಅಣತೆಯಂತೆ ನಾನು ನಡೆಯುತ್ತಿಲ್ಲ, ಹಣದ ಬೇಡಿಕೆ ಇಟ್ಟಾಗ ಹಣ ಕೊಟ್ಟಿಲ್ಲ. ಹೀಗಾಗಿ ನನ್ನ ವರ್ಗಾವಣೆಗೆ ಶಾಸಕರು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಸುಳ್ಳು ಆರೋಪ ಮಾಡಿ ನನ್ನ ವರ್ಗಾವಣೆ ಮಾಡಲು ಸಂಬಂಧಿಸಿದ ಇಲಾಖೆ ಸಚಿವರಿಗೆ ಶಿಫಾರಸು ಮಾಡಿದ್ದಾರೆ ಎಂದು ಪತ್ರವೊಂದನ್ನು ಸಂಗಾ ಬಹಿರಂಗಪಡಿಸಿದ್ದಾರೆ.