ಕಲಬುರಗಿ : ಕಾರು ಅಪಘಾತ ಪ್ರಕರಣದಲ್ಲಿ ರಾಜಕೀಯ ದುರುದ್ದೇಶದಿಂದ ತಮ್ಮ ಪುತ್ರ ಚಿದಾನಂದ ಸವದಿ ಹೆಸರು ತಳಕು ಹಾಕಿಸುವ ಹಯತ್ನ ನಡೆದಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ನನ್ನ ಮಗ ಚಿದಾನಂದ ಹಾಗೂ ಸ್ನೇಹಿತರು ದೇವಸ್ಥಾನಕ್ಕೆ ಹೋಗಿ ಬರುವಾಗ ಕಾರು ಅಪಘಾತವಾಗಿರೋದು ಸತ್ಯ. ಅಪಘಾತವಾದ ಕಾರು ಚಿದಾನಂದ ಹೆಸರಿನಲ್ಲಿದೆ. ಘಟನೆಯಲ್ಲಿ ವ್ಯಕ್ತಿಯೋರ್ವರು ನಿಧನರಾಗಿರುವುದಕ್ಕೆ ವಿಷಾಧಿಸುತ್ತೇನೆ. ಆದರೆ, ಚಿದಾನಂದ ಮುಂದಿನ ಪಾರ್ಚೂನ್ ಕಾರಿನಲ್ಲಿದ್ದರು. ಹಿಂದಿನ ಕಾರಿಗೆ ಅಪಘಾತವಾಗಿದೆ ಎಂದು ವಿವರಿಸಿದರು.
ಓದಿ: ಹುನಗುಂದ ಬಳಿ ಡಿಸಿಎಂ ಲಕ್ಷಣ್ ಸವದಿ ಪುತ್ರನ ಕಾರು ಡಿಕ್ಕಿ: ಬೈಕ್ ಸವಾರ ಸಾವು
ಪ್ರಕರಣ ಸಂಬಂಧ ಎಫ್ಐಆರ್ ಕೂಡ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಪಘಾತವಾದ ಕಾರಿನಲ್ಲಿ ಚಿದಾನಂದ ಇರಲಿಲ್ಲ ಎಂದದ್ಮೇಲೆ ನನ್ನ ಮಗನ ಮೇಲೆ ಎಫ್ಐಆರ್ ದಾಖಲಿಸುವ ಪ್ರಶ್ನೆಯೇ ಉದ್ಭವಿಸೋದಿಲ್ಲ.
ರಾಜಕೀಯ ದುರುದ್ದೇಶದಿಂದ ಆರೋಪ ಮಾಡಲಾಗುತ್ತಿದೆ. ಚಿದಾನಂದ ಹೆಸರು ಎಫ್ಐಆರ್ನಲ್ಲಿ ಕೈ ಬಿಡಲಾಗಿದೆ. ಎರಡು ದಿನದಲ್ಲಿ ಇದರ ಹಿಂದೆ ಯಾರಿದ್ದಾರೆ ಅನ್ನೋದನ್ನು ಬಹಿರಂಗ ಮಾಡ್ತೇನೆ ಎಂದು ಹೇಳಿದರು.
ಓದಿ: ಅಪಘಾತವಾದ ಕಾರಿನಲ್ಲಿ ನನ್ನ ಮಗ ಇರಲಿಲ್ಲ : ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ