ETV Bharat / state

ಕಲಬುರಗಿ: ಕೋವಿಡ್ ಲಸಿಕಾ ಡ್ರೈ ರನ್ ಕೇಂದ್ರಕ್ಕೆ ಭೇಟಿ ಡಿಸಿ ಭೇಟಿ, ಪರಿಶೀಲನೆ - ಲಸಿಕೆ ಡ್ರೈ ರನ್ ಕೇಂದ್ರ

ಕಲಬುರಗಿ ನಗರದ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ, ಲಸಿಕೆ ರಿಹರ್ಸಲ್ ನಡೆಸಿರುವ ಕುರಿತು ಪರಿಶೀಲನೆ ನಡೆಸಿದರು.

dry run
dry run
author img

By

Published : Jan 2, 2021, 1:13 PM IST

ಕಲಬುರಗಿ: ಕೋವಿಡ್ ಲಸಿಕೆ ಡ್ರೈ ರನ್ ಕೇಂದ್ರಕ್ಕೆ ಜಿಲ್ಲಾಧಿಕಾರಿ ವಿವಿ ಜ್ಯೋತ್ಸ್ನಾ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಲಬುರಗಿ ನಗರದ ಅಶೋಕನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಡಿಸಿ, ಲಸಿಕೆ ರಿಹರ್ಸಲ್ ನಡೆಸಿರುವ ಕುರಿತು ಪರಿಶೀಲನೆ ನಡೆಸಿದರು.

ಈ ವೇಳೆ ಫಲಾನುಭವಿಗಳಿಗೆ ಗುಲಾಬಿ ಹೂವು ಕೊಟ್ಟು ಸ್ವಾಗತ ಮಾಡುವ ಸಿಬ್ಬಂದಿ ಕಾರ್ಯಕ್ಕೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು. ಸೋಂಕಿತರಿಂದ ನಿರ್ದಿಷ್ಟ ಅಂತರ ಪಾಲಿಸಬೇಕಾಗುತ್ತದೆ, ಹೀಗಿರುವಾಗ ಸೋಂಕಿತರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತಿಸುವ ಕಾರ್ಯ ಬೇಡ ಎಂದು ಅಧಿಕಾರಿಗಳಿಗೆ ಡಿಸಿ ಸಲಹೆ ನೀಡಿದರು.

ಡ್ರೈ ರನ್ ಕೇಂದ್ರಕ್ಕೆ ಡಿಸಿ ಭೇಟಿ

ಪರಿಶೀಲನೆ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಡ್ರೈ ರನ್‌ಗೆ ರಾಜ್ಯದ 5 ಜಿಲ್ಲೆಗಳಲ್ಲಿ ಕಲಬುರಗಿ ಜಿಲ್ಲೆ ಆಯ್ಕೆಯಾಗಿದ್ದು, ಜಿಲ್ಲೆಯ ಮೂರು ಕೇಂದ್ರಗಳಲ್ಲಿ ಲಸಿಕೆ ಡ್ರೈ ರನ್ ಸರಾಗವಾಗಿ ನಡೆಯುತ್ತಿದೆ. ಸದ್ಯದ ಮಟ್ಟಿಗೆ ಯಾವುದೇ ಸಮಸ್ಯೆ ಕಂಡುಬಂದಿಲ್ಲ. ಸಾಯಂಕಾಲದವರೆಗೆ ಮೂರು ಕೇಂದ್ರದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಆ್ಯಪ್ ಸೇರಿ ತಾಂತ್ರಿಕ ತೊಂದರೆ ಅಥವಾ ಇತರ ಸಮಸ್ಯೆಗಳು ಕಂಡು ಬಂದರೆ ಸರ್ಕಾರಕ್ಕೆ ವರದಿಯಲ್ಲಿ ತಿಳಿಸುವುದಾಗಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.