ETV Bharat / state

ತೈಲಬೆಲೆ ಕುಸಿತಗೊಂಡಿದ್ದರೂ ದೇಶದಲ್ಲಿ ಮಾತ್ರ ಏರಿಕೆ ಏಕೆ: ಶಾಸಕ ಅಜಯ್​ ಸಿಂಗ್​ ಪ್ರಶ್ನೆ

author img

By

Published : Jun 29, 2020, 12:17 PM IST

ಕೊರೊನಾದಿಂದ ಜನ ಸಂಕಷ್ಟದಲ್ಲಿರುವಾಗ, ಕೇಂದ್ರ ಸರ್ಕಾರ ಗಾಯದ ಮೇಲೆ ಬರೆ ಎಳೆಯುತ್ತಿದೆ. ಕೂಡಲೇ ತೈಲ ದರ ಇಳಿಕೆ ಮಾಡಬೇಕು ಎಂದು ಶಾಸಕ ಅಜಯಸಿಂಗ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

MLA Ajaysingh
ಶಾಸಕ ಅಜಯ್​ ಸಿಂಗ್

ಕಲಬುರಗಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ವಿರೋಧ ವ್ಯಕ್ತಪಡಿಸಿರುವ ಜೇವರ್ಗಿ ಶಾಸಕ ಅಜಯಸಿಂಗ್ ಅವರು, ಜಾಗತಿಕವಾಗಿ ತೈಲ ಕುಸಿತಗೊಂಡಿದ್ದರೂ ಭಾರತದಲ್ಲಿ ಮಾತ್ರ ಏರು ಮುಖವಾಗುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.

ಕೆಲವೆಡೆ ಪೆಟ್ರೋಲ್​​ಗಿಂತ ಡೀಸೆಲ್​​​ ದರ ಹೆಚ್ಚಿದೆ. ಅವುಗಳ ಮೇಲೆ ಶೇ 258 ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದೆ. ₹ 18 ಲಕ್ಷ ಕೋಟಿ ಜನಸಾಮಾನ್ಯರಿಂದ ಪಡೆದಿದ್ದಾರೆ. ಇಷ್ಟು ಪಡೆದರೂ ತೆರಿಗೆ ಹಣವನ್ನು ಜನಸಾಮಾನ್ಯರ ಕಲ್ಯಾಣಕ್ಕೆ ಬಳಸುತ್ತಿಲ್ಲ ಎಂದು ಕಿಡಿಕಾರಿದರು.

ಶಾಸಕ ಅಜಯ್​ ಸಿಂಗ್

ದೇಶ ಹಾಗೂ ರಾಜ್ಯದಲ್ಲಿ ಕೊರೊನಾ ನಿಯಂತ್ರಣ ತಪ್ಪುತ್ತಿದೆ. ವಿಶ್ವದ ಸ್ಥಾನದತ್ತ ಭಾರತ ಮುನ್ನುಗ್ಗುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು, ಕಲಬುರಗಿಯಲ್ಲೂ ಅದು ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದೆ ಎಂದರು.

ಇಎಸ್ಐ ಆಸ್ಪತ್ರೆಯಲ್ಲಿ ಏಕೆ ಪರೀಕ್ಷೆ ನಡೆಸುತ್ತಿಲ್ಲ? ಕೊರೊನಾ ಏರಿಕೆಯಲ್ಲಿ ಬೆಂಗಳೂರು ನಂತರದ ಸ್ಥಾನದಲ್ಲಿ ಕಲಬುರಗಿ ಇದೆ. ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಬೆಂಗಳೂರಿನಲ್ಲಿ ಲಾಕ್​​​​ಡೌನ್ ಮಾಡುವ ಕುರಿತು ಶಾಸಕರ ಸಭೆ ಕರೆಯುತ್ತಾರೆ. ಆದರೆ, ಕಲಬುರಗಿಯಲ್ಲಿ ಏಕೆ ಸಭೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಕಲ್ಯಾಣ ಕರ್ನಾಟಕದ ವಿಷಯದಲ್ಲಿ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಅವರು ಆರೋಪಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.