ಕಲಬುರಗಿ : ನಗರದ ಹೃದಯ ಭಾಗದಲ್ಲಿರುವ ಸರದಾರ ವಲ್ಲಭಾಯಿ ಪಟೇಲ್ ಸರ್ಕಲ್ನಲ್ಲಿ ಹೈಮಾಸ್ಕ್ ವಿದ್ಯುತ್ ದೀಪಗಳು ಕಡಿದು ಜೋತು ಬಿದ್ದದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದ್ದರೂ ಪಾಲಿಕೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ರೈಲ್ವೆ ಸ್ಟೇಷನ್‍ಗೆ ಹೋಗುವ ಒನ್‌ವೇ ರಸ್ತೆಯಲ್ಲಿ, ಹೈಮಾಸ್ಕ್ ವಿದ್ಯುತ್ ಕಂಬದಿಂದ ದೀಪಗಳು ಕೆಳಗಡೆ ಸರಿದಿವೆ. ಅದರೂ ಕೂಡಾ ದೀಪಗಳು ಹತ್ತಿ ಉರಿಯುತ್ತಿದ್ದು, ಅಪಾಯದ ಮುನ್ಸೂಚನೆ ನೀಡುತ್ತಿವೆ. ಪ್ರತಿ ದಿನ ನೂರಾರು ಜನರು ಮತ್ತು ವಾಹನಗಳು ತಿರುಗಾಡುತ್ತಿವೆ. ಜೋತು ಬಿದ್ದ ಲೈಟ್‌ಗಳು ಗಾಳಿಗೆ ಅಲುಗಾಡುತ್ತಿದ್ದು, ಯಾವಾಗ ಬೇಕಾದರೂ ಕಡಿದು ಬಿದ್ದು ಅನಾಹುತ ಸಂಭವಿಸಬಹುದಾಗಿದೆ. ಅಮಾಯಕರ ಪ್ರಾಣ ಹೋಗುವ ಮುನ್ನವೇ ಮಹಾನಗರ ಪಾಲಿಕೆ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.