ETV Bharat / state

ಸಿಲಿಂಡರ್​ ಸ್ಫೋಟ: ಕಲಬುರಗಿಯಲ್ಲಿ ಮನೆ ಬೆಂಕಿಗಾಹುತಿ

ಸಿಲಿಂಡರ್​ ಸ್ಫೋಟಗೊಂಡು ಮನೆ ಸುಟ್ಟು ಭಸ್ಮವಾದ ಘಟನೆ ಅಫಜಲಪುರ ತಾಲೂಕಿನಲ್ಲಿ ನಡೆದಿದೆ.

cylinder-explosion-in-kalaburagi
ಸಿಲಿಂಡರ್​ ಸ್ಫೋಟ: ಬೆಂಕಿಗಾಹುತಿಯಾದ ಮನೆ
author img

By

Published : Apr 5, 2023, 9:53 PM IST

ಕಲಬುರಗಿ: ಗ್ಯಾಸ್ ಸಿಲಿಂಡರ್​ ಸ್ಫೋಟಗೊಂಡ ಪರಿಣಾಮ ಮನೆ ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಅಫಜಲಪುರ ತಾಲೂಕಿನ ಅಳ್ಳಗಿ ಬಿ ಗ್ರಾಮದಲ್ಲಿ ಇಂದು ನಡೆದಿದೆ. ಗ್ರಾಮದ ಶರಣಪ್ಪ ಪೂಜಾರಿ ಎಂಬುವವರ ಮನೆಯಲ್ಲಿ ಅವಘಡ ಸಂಭವಿಸಿತು. ಮನೆಯಲ್ಲಿದ್ದ 5.50 ಲಕ್ಷ ನಗದು, 40 ಗ್ರಾಂ ಬಂಗಾರ ಸೇರಿದಂತೆ ಬೆಲೆಬಾಳುವ ವಸ್ತುಗಳು, ದವಸ ಧಾನ್ಯ, ಅಗತ್ಯ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.

ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಓ ಮತ್ತು ಆರ್​ಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್​ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಘಟನೆ ನಡೆದಿದ್ದು ಜೀವ ಹಾನಿ ಸಂಭವಿಸಿಲ್ಲ. ಅಫಜಲಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸರಣಿ‌ ರಸ್ತೆ ಅಪಘಾತ : ಜಿಲ್ಲೆಯ ಕಮಲಾಪುರ ಹೊರವಲಯದಲ್ಲಿ ಎರಡು ಕಾರು ಮತ್ತು ದ್ವಿಚಕ್ರ ವಾಹನದ ನಡುವೆ ಸರಣಿ ಅಪಘಾತ ಸಂಭವಿಸಿ ಕಾಂಗ್ರೆಸ್​ ನಾಯಕ‌ ಬಾಬು ಹೊನ್ನಾನಾಯಕ‌ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ. ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಬಾಬು ಹೊನ್ನಾನಾಯಕ ಕಾರಿಗೆ, ಇನ್ನೊಂದು ಕಾರು ಮತ್ತು ಬೈಕ್​ ಡಿಕ್ಕಿಯಾಗಿದೆ.

ಘಟನೆಯಲ್ಲಿ ಹೊನ್ನಾನಾಯಕ ಅವರ ತೆಲೆಗೆ ಬಲವಾದ ಪಟ್ಟು ಬಿದಿದ್ದರಿಂದ ರಕ್ತಸ್ರಾವ ಆಗಿದೆ. ಅವರನ್ನು ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಲಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಮಾಲಿಕ: ತಿನ್ನಲೆಂದು ಹೊಲದಲ್ಲಿ‌ನ ಮೆಕ್ಕೆಜೋಳ ಮುರಿದ ವ್ಯಕ್ತಿಯನ್ನು ಹೊಲದ ಮಾಲಿಕ ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ಜೇವರ್ಗಿ ತಾಲೂಕಿನ ನೇದಲಗಿ ಗ್ರಾಮದಲ್ಲಿ ನಡೆದಿದೆ. ಸುರೇಶ ವಡ್ಡರ್ ಹಲ್ಲೆಗೊಳಗಾದ ವ್ಯಕ್ತಿ, ರಾವುತ್ ಮಾಲಿಗೌಡ ಥಳಿಸಿದ ಆರೋಪಿಯಾಗಿದ್ದಾರೆ. ಸುರೇಶ, ರಾವುತ್ ಮಾಲಿಗೌಡರ ಬಳಿ ಕೂಲಿ ಕೆಲಸಕ್ಕೆ ಹೋಗಿದ್ದ, ಹಸುಗಳಿಗೆ ಮೇವು ಹಾಕುವಂತೆ ತಿಳಿಸಿದ್ದಾನೆ. ಹಸುಗಳಿಗೆ ಮೇವು ಹಾಕಿ ಬರುವಾಗ ಹೊಲದಲ್ಲಿನ ಮೆಕ್ಕೆಜೋಳದ ತೆನೆಯೊಂದು ಸುರೇಶ್​ ಮುರಿದಿದ್ದ. ಇದರಿಂದ ಕುಪಿತಗೊಂಡ ರಾವುತ್ ಮಾಲಿಗೌಡ, ಸುರೇಶನನ್ನು ಮರಕ್ಕೆ ಕಟ್ಟಿ ಹಿಗ್ಗಾಮುಗ್ಗ ಥಳಿಸಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಆರೋಪಿಸಲಾಗಿದೆ. ವಿಷಯ ತಿಳಿದ ಸುರೇಶ್​ ಸಹೋದರಿ ಹೊಲಕ್ಕೆ ಹೋಗಿ ಸಹೋದರನನ್ನು ಬಿಡಿಸಿಕೊಂಡು ಬಂದು ಜೇವರ್ಗಿ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಕಾರಿನಲ್ಲಿ ವ್ಯಕ್ತಿ ಸಜೀವ ದಹನ ಪ್ರಕರಣ: ಅರ್ಧ ಸುಟ್ಟ ಉಡುಪಿನಿಂದ ಗುರುತು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.