ETV Bharat / state

ರಾತ್ರೋರಾತ್ರಿ ಮಾರಕಾಸ್ತ್ರದೊಂದಿಗೆ ಹೊಲಗಳಿಗೆ ನುಗ್ಗುವ ಖದೀಮರು.. ಜಾನುವಾರು ಕಳವು, ರೈತರು ಕಂಗಾಲು - bhimalli cow theft case

ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ಜಾನುವಾರುಗಳ ಕಳ್ಳತನ- ರೈತರು ಕಂಗಾಲು- ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪ

cow theft in Bhimalli village
ಭೀಮಳ್ಳಿ ಗ್ರಾಮದಲ್ಲಿ ಜಾನುವಾರುಗಳ ಕಳ್ಳತನ ದೂರು ನೀಡಿದರು ಪ್ರಯೋಜನವಿಲ್ಲ ಎಂದ ರೈತರು
author img

By

Published : Jul 12, 2022, 2:12 PM IST

ಕಲಬುರಗಿ: ಕಲಬುರಗಿ ತಾಲೂಕಿನ ಭೀಮಳ್ಳಿ ಗ್ರಾಮದಲ್ಲಿ ಖದೀಮರು ಜಾನುವಾರುಗಳನ್ನು ಕದಿಯುತ್ತಿದ್ದಾರೆ. ಹೀಗಾಗಿ ದಿಕ್ಕೇ ತೋಚದಂತಾಗಿರುವ ರೈತರು ತೊಂದರೆ ಅನುಭವಿಸುವಂತಾಗಿದೆ.

ರಾತ್ರಿ ಆಗುತ್ತಿದ್ದಂತೆ ಮಾರಕಾಸ್ತ್ರಗಳೊಂದಿಗೆ ಹೊಲಗಳಿಗೆ ನುಗ್ಗಿ ಜಾನುವಾರುಗಳನ್ನ ಕದ್ದೊಯ್ಯುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಗ್ರಾಮದ ರೈತ ಪುಂಡಲೀಕ ಪೂಜಾರಿ ಎಂಬುವವರ ಹೊಲದಲ್ಲಿ ಹಸುಗಳನ್ನು ಹೊತ್ತೊಯ್ದಿದ್ದು, ಬಿತ್ತನೆ ಕಾರ್ಯ ಮಾಡಲಾಗದೆ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಸುಮಾರು ವರ್ಷಗಳಿಂದ ಭೀಮಳ್ಳಿ ಗ್ರಾಮದಲ್ಲಿ ಜಾನುವಾರುಗಳ ಕಳ್ಳತನವಾಗುತ್ತಿದ್ದು, ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಳ್ಳತನ ಆದಾಗ ಮಾತ್ರ ಪೊಲೀಸರು ಗ್ರಾಮಕ್ಕೆ ಭೇಟಿ ಕೊಟ್ಟು ಹೋಗ್ತಾರೆಯೇ ಹೊರತು ಆರೋಪಿಗಳನ್ನು ಮಟ್ಟ ಹಾಕುವ ಕೆಲಸವನ್ನು ಪೊಲೀಸರು ಮಾಡುತ್ತಿಲ್ಲ ಎಂದು ರೈತರು ಆರೋಪಿಸಿದ್ದಾರೆ.

ಇದನ್ನೂ ಓದಿ: ಮೈಸೂರಲ್ಲಿ ಒಂಟಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ; ದಾಳಿ ವೇಳೆ ನಾಲ್ವರು ಯುವತಿಯರ ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.