ETV Bharat / state

ಕೋವಿಡ್​​ ನಿಯಮ ಉಲ್ಲಂಘನೆ ಆರೋಪ: ಸಮಾಜ ಸೇವಕ ಕೊರಬು ವಿರುದ್ಧ ಎಫ್‌ಐಆರ್ - Kalburgi

ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಸಮಾಜ ಸೇವಕ ಜೆ.ಎಂ.ಕೊರಬು ಸೇರಿ 50 ಜನರ ವಿರುದ್ಧ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

FIR against social worker
ಸಮಾಜ ಸೇವಕ ಕೊರಬು ವಿರುದ್ಧ ಎಫ್‌ಐಆರ್
author img

By

Published : Jun 2, 2021, 10:02 AM IST

ಕಲಬುರಗಿ: ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಹುಟ್ಟುಹಬ್ಬ ಆಚರಿಸಿಕೊಂಡ ಸಮಾಜ ಸೇವಕ ಜೆ.ಎಂ.ಕೊರಬು ವಿರುದ್ಧ ಅಫಜಲಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಎರಡು ದಿನಗಳ ಹಿಂದೆ ಹುಟ್ಟುಹಬ್ಬ ಆಚರಿಸಿಕೊಂಡ ಕೊರಬು, ಒಂದು ಇಂಡಿಕಾ ಹಾಗೂ ಒಂದು ಟವೇರಾ ವಾಹನವನ್ನು ಆ್ಯಂಬುಲೆನ್ಸ್​ಗಳನ್ನಾಗಿ ಪರಿವರ್ತಿಸಿ ಕೊರೊನಾ ಪೀಡಿತ ಸಾರ್ವಜನಿಕರ ಸೇವೆಗೆ ನೀಡಿದ್ದರು. ವಾಹನ ಲೋಕಾರ್ಪಣೆ ಹಿನ್ನೆಲೆ ಅಫಜಲಪುರ ತಾಲೂಕು ಆಸ್ಪತ್ರೆ ಮುಂದೆ ಸುಮಾರು 50 ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಿದ್ದರು. ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಂಪೂರ್ಣವಾಗಿ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಲಾಗಿತ್ತು ಎನ್ನಲಾಗಿದೆ.

ಈ ಹಿನ್ನೆಲೆ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜೆ.ಎಂ.ಕೊರಬು ಸೇರಿ 50 ಜನರ ವಿರುದ್ಧ ಅಫಜಲಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.